• Slide
    Slide
    Slide
    previous arrow
    next arrow
  • ವಿವಿಧ ಬೇಡಿಕೆ ಈಡೇರಿಸುವಂತೆ ವಿದ್ಯಾರ್ಥಿಗಳಿಂದ ತಹಶೀಲ್ದಾರರಿಗೆ ಮನವಿ

    300x250 AD

    ಕುಮಟಾ: ಕರ್ನಾಟಕ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯ ಕಾಲೇಜುಗಳಲ್ಲಿ ನಡೆಸುವ ಅಸಮರ್ಪಕ ಪರೀಕ್ಷಾ ಪದ್ದತಿಯನ್ನು ಕೈಬಿಟ್ಟು ಸಮರ್ಪಕವಾಗಿ ಪರೀಕ್ಷೆ ನಡೆಸವಂತಾಗಬೇಕು ಎಂದು ಆಗ್ರಹಿಸಿ ಡಾ.ಎ.ವಿ.ಬಾಳಿಗಾ ಕಾಲೇಜಿನ ಪದವಿ ವಿದ್ಯಾರ್ಥಿಗಳು ಶುಕ್ರವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

    ಪದವಿ ಶಿಕ್ಷಣದ 1, 3, 5 ಸೆಮಿಷ್ಟರ್ ಪರೀಕ್ಷೆಗಳನ್ನು ಮಾರ್ಚ್, ಏಪ್ರೀಲ್ ತಿಂಗಳಿನಲ್ಲಿ ನಡೆಸದೇ ವಿವಿಧ ಕಾರಣಗಳಿಂದ ಮುಂದೂಡಿ ಕಳೆದ ಮೇ 17 ರಿಂದ 2, 4, 6 ಸೆಮಿಷ್ಟರ್ ತರಗತಿಗಳನ್ನು ಆರಂಭಿಸಿದೆ. ಮೇ 17 ರಿಂದ ತರಗತಿಗಳನ್ನು ಪ್ರಾರಂಭಿಸಿ ಅ.14 ರವರೆಗೆ ಪಾಠ, ಪ್ರವಚನ ಮಾಡಲು ಅವಕಾಶ ಕಲ್ಪಿಸಿ, ಪ್ರಸ್ತುತ ಅ.7 ರಿಂದ ಪಾಠ, ಪ್ರವಚನ ನಿಲ್ಲಿಸುವಂತೆ ಸೂಚಿಸಿದೆ. ಅಲ್ಲದೇ, 2, 4, 6 ನೇ ಸೇಮಿಷ್ಟರ್ ಆರಂಭದಲ್ಲಿ 1, 3, 5 ಸೇಮಿಷ್ಟರ್ ಪರೀಕ್ಷೆಗಳನ್ನು ಆ. 20 ರಿಂದ ಆರಂಭಿಸಿ ಸೆ. ನಿಂದ 2, 4, 6 ತರಗತಿಗಳನ್ನು ಆರಂಭಿಸುವುದಾಗಿ ಪ್ರಕಟಿಸಿದೆ.

    ನಂತರ 2, 4, 6 ಸೇಮಿಷ್ಟರ್ ಪರೀಕ್ಷೆಗಳನ್ನು ಬಹು ಆಯ್ಕೆ ಪ್ರಶ್ನೆಗಳ ಮೂಲಕ ಒಂದೂವರೇ ತಾಸಿನ ಪರೀಕ್ಷೆ ನಡೆಸುವುದಾಗಿ ತಿಳಿಸಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಈ ಪದ್ದತಿಯನ್ನು ಅನುಮೊದಿಸುವಂತೆ ಸೂಚಿಸಿ, ತನ್ನ ವೆಬ್‍ಸೈಟ್‌ನಲ್ಲಿ ಕೆಲ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟಿಸಿದೆ. ಈಗಾಗಲೇ ಈ ಬಹು ಆಯ್ಕೆ ಪದ್ದತಿಯಲ್ಲೇ ಪಾಠ, ಪ್ರವಚನಗಳು ನಡೆದಿವೆ. ಹೀಗಾಗಿ ನಾವು ಬಹು ಆಯ್ಕೆ ಪದ್ದತಿಯ ಪರೀಕ್ಷೆಗೆ ಮಾನಸಿಕವಾಗಿ, ಬೌದ್ಧಿಕವಾಗಿ ಸಿದ್ದರಾಗಿದ್ದೇವೆ. ಈ ನಡುವೆಯೇ ಯು.ಜಿ.ಸಿ ಯವರು ಕೇವಲ ಅಂತಿಮ ಸೇಮಿಷ್ಟರ್ ಪರೀಕ್ಷೆಗಳನ್ನು ಮಾತ್ರ ನಡೆಸುವಂತೆ ಸೂಚಿಸಿದೆ.

    300x250 AD

    ಅಲ್ಲದೇ, ಮಧ್ಯಂತರ ಸೇಮಿಷ್ಟರ್ ವಿಧ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನ ಅಂಕಗಳ ಆಧಾರದಲ್ಲಿ ಪ್ರಮೋಟ್ ಮಾಡಿ ಮುಂದಿನ ತರಗತಿಗಳಿಗೆ ಪ್ರವೇಶ ನೀಡಲು ಸೂಚಿಸಿದೆ. ಇಂತಹ ಅಸಮರ್ಪಕ ಪರೀಕ್ಷಾ ವಿಧಾನದಿಂದ ವಿದ್ಯಾರ್ಥಿಗಳು ಮಾನಸಿಕ ಕ್ಷೋಭೆಗೆ ಒಳಗಾಗಿದ್ದು, ತಕ್ಷಣ ಸಮರ್ಪಕ ಪರೀಕ್ಷಾ ವಿಧಾನಗಳನ್ನು ಅಳವಡಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಪವನ ಪ್ರಭು, ಪ್ರಣವ ಪಂಡಿತ, ಸರ್ವೇಶ ಪೈ, ಸುದರ್ಶನ ಭಟ್ಟ, ಸಂಪ್ರಿತಾ ಭಂಡಾರಿ, ಅಭಿಷೇಕ ದಿವಾಕರ, ದರ್ಶನ ಜೆ.ಪಿ, ಪ್ರತ್ವಿಕ ಮಡಿವಾಳ, ಯೋಗಿನಿ ಭಂಡಾರಕರ ಸೇರಿದಂತೆ ಇನ್ನಿತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top