ದಾಂಡೇಲಿ: ಜೊಯಿಡಾ ತಾಲೂಕಿನ ಶ್ರೀಕ್ಷೇತ್ರ ಉಳವಿ ಚನ್ನಬಸವೇಶ್ವರ ಮಠದಲ್ಲಿ ಮೇ.25, 26ರಂದು ಎರಡು ದಿನ ಚಿಂತನ ಕಮ್ಮಟ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆಯ ವಿರಕ್ತ ಮಠದ ಬಸವಪ್ರಭು ಸ್ವಾಮಿ ಹೇಳಿದರು.
ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀಜಗದ್ಗುರು ಮರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ ಹಾಗೂ ಪರಿವರ್ತನಪರ ಧರ್ಮ ಸಂಸತ್ ವತಿಯಿಂದ ಉದಾತ್ತ ಚಿಂತನ, ಜಾಗೃತ ಜೀವನ ವಿಷಯಗಳ ಕುರಿತು ಧರ್ಮಬಂಧುಗಳಿಗಾಗಿ ಚಿಂತನ ಕಮ್ಮಟ ಕಾರ್ಯಕ್ರಮ ಆಯೋಜಿಸಲಾಗಿದೆ. ಧಾರ್ಮಿಕ ಶಿಬಿರದ ಅಧ್ಯಕ್ಷತೆಯನ್ನು ಚಿತ್ರದುರ್ಗದ ಶ್ರೀ ಜಗದ್ಗುರು ಮರುಘರಾಜೇಂದ್ರ ಬೃಹನ್ಮಠ, ಶೂನ್ಯಪೀಠಾಧ್ಯಕ್ಷರು, ತ್ರಿವಿಧ ದಾಸೋಹಿ ಡಾ.ಶಿಮಮೂರ್ತಿ ಮರುಘಾ ಶರಣರು ವಹಿಸಲಿದ್ದಾರೆ. ಜೊತೆಗೆ ರಾಜ್ಯದ ನೂರಕ್ಕೂ ಹೆಚ್ಚು ಮಠಾಧಿಶರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಧರ್ಮಬಂಧುಗಳು ಚಿಂತನ ಕಮ್ಮಟ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಹಾವೇರಿಯ ಹೊಸಮಠದ ಬಸವಲಿಂಗ ಸ್ವಾಮಿ, ತಿರುವಳ್ಳಿಯ ಮುರುಘಾಮಠದ ಬಸವನಿಂರಜನ ಸ್ವಾಮಿ, ಶಿಕಾರಿಪುರದ ಚನ್ನಬಸವ ಸ್ವಾಮಿ, ಚಿತ್ರದುರ್ಗ ಮುರುಘಾಮಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಹಳಿಯಾಳ ಬಸವಕೇಂದ್ರದ ಅಧ್ಯಕ್ಷೆ ಸುಮಂಗಲಾ ಅಂಗಡಿ ಮೊದಲಾದವರು ಇದ್ದರು.