ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾದ ಅಶೋಕ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೇ 95.65ರಷ್ಟಾಗಿದೆ. ಪರೀಕ್ಷೆಗೆ ಕುಳಿತ 23 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪ್ರೌಢಶಾಲೆಗೆ ಪವನ ಗೌಡ ಶೇ 97.60 (610) ಅಂಕ ಪಡೆದು ಪ್ರಥಮ, ರಕ್ಷಿತಾ ಹೆಗಡೆ ಶೇ 97.28 (608) ದ್ವಿತೀಯ ಹಾಗೂ ನಾಗಶ್ರೀ ಹೆಗಡೆ ಶೇ 95.52 (597) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ರಾಜೇಂದ್ರ ಕಾಂಬಳೆ ತಿಳಿಸಿದ್ದಾರೆ.
ಅಶೋಕ ಪ್ರೌಢಶಾಲೆಗೆ ಶೇ.95.65 ಫಲಿತಾಂಶ
