ಕಾರವಾರ: ಇಲ್ಲಿನ ಸೇಂಟ್ ಮೈಕಲ್ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾನಿಕಾ ಎಸ್.ಭಟ್ಕಳ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 615 ಅಂಕ ಪಡೆದಿದ್ದಾಳೆ.
ಇಂಗ್ಲೀಷ್ 121, ಕನ್ನಡ, ಹಿಂದಿ ತಲಾ 100, ಗಣಿತ 98, ವಿಜ್ಞಾನ 96, ಸಮಾಜ ವಿಜ್ಞಾನ ವಿಷಯಕ್ಕೆ 100 ಅಂಕ ಪಡೆದಿದ್ದಾಳೆ. ಈಕೆ ನಗರ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿರುವ ಶ್ರೀಪಾದ ಭಟ್ಕಳ ಹಾಗೂ ಗೀತಾ ದಂಪತಿಯ ಪುತ್ರಿಯಾಗಿದ್ದಾಳೆ.