ಶಿರಸಿ: ತಾಲೂಕಿನ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿ ಇದರ 2021ರ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಶೇಕಡಾ.93.33% ದಾಖಲಾಗಿದೆ.
ಪ್ರೌಢಶಾಲೆಯಿಂದ 2021ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತ 30 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉತ್ತೀರ್ಣ ಪ್ರಮಾಣ ಶೇಕಡಾ.93.33% ಆಗಿರುತ್ತದೆ. ಗುಣಾತ್ಮಕ ಶಿಕ್ಷಣ ಫಲಿತಾಂಶದಲ್ಲಿ 84.48% ಸಾಧನೆ ಮಾಡಿದ್ದು “ಎ” ಶ್ರೇಣಿಯನ್ನು ಗಳಿಸಿ ಸಾಧನೆ ಮಾಡಿದೆ.
ಮಹಾಲಕ್ಷ್ಮೀ ಭಾಸ್ಕರ ನಾಯ್ಕ, ಕಿಬ್ಬಳ್ಳಿ ಶೇ.99.68%(623/625) ಪ್ರತಿಶತ ಅಂಕ ಪಡೆದುರಾಜ್ಯಕ್ಕೆತೃತೀಯ ಸ್ಥಾನವನ್ನು, ಶಾಲೆಗೆ ಪ್ರಥಮ ಸ್ಥಾನವನ್ನು, ಶ್ರೇಯಾ ಸತೀಶ ಭಟ್ಟ ಹೊಸ್ಮನೆ ಶೇ.99.04%(619/625) ಪ್ರತಿಶತ ಅಂಕ ಪಡೆದು ರಾಜ್ಯಕ್ಕೆ ಏಳನೇ ಸ್ಥಾನವನ್ನು ,ಶಾಲೆಗೆ ದ್ವಿತೀಯ ಸ್ಥಾನವನ್ನು, ಕುಮಾರಿ ರಶ್ಮೀ ಶೀನಾ ಮೊಗೇರ್ ಬಾವೀಕೈ ಶೇ. 96.96%(606/625) ಪ್ರತಿಶತ ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.
13ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಈ ಕುರಿತು ಆಡಳಿತ ಮಂಡಳಿಯ ಅಧ್ಯಕ್ಷ ಎಮ್‍ಎಲ್ ಹೆಗಡೆ ಹಲಸಿಗೆ ಮತ್ತು ಆಡಳಿತ ಮಂಡಳಿಯ ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ. ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಜಿ.ಹೆಗಡೆ ಮತ್ತು ಶಿಕ್ಷಕ-ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.