ಶಿರಸಿ: ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ ದೇವಾಲಯದಲ್ಲಿ ನೂತನ ಮಹದ್ವಾರದ ಶಿಖರ ಕಳಶ ಪೂಜೆ ಶುಕ್ರವಾರ ಸಂಜೆ ನೆರವೇರಿತು.
ಸಂಜೆ ವಿ. ಕುಮಾರ ಭಟ್ ಕೊಳಗಿಬೀಸ್, ವಿ. ಗಣಪತಿ ಭಟ್ ಕಿಬ್ಬಳ್ಳಿ ಹಾಗೂ ಇತರ ವೈದಿಕರು ಸಂಜೆ ವಾಸ್ತು ಹೋಮ, ರಾಕ್ಷೋಗ್ರ ಹೋಮ ಕಾರ್ಯ ನಡೆಸಿದರು. ಬಳಿಕ ವೇದ ಘೋಷ, ಪೂರ್ಣಕುಂಭದೊಂದಿಗೆ ಕಳಶಪೂಜೆ ನೆರವೇರಿಸಲಾಯಿತು.
ದೇವಾಲಯದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ, ಶಿರಸಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ಕುಟುಂಬ, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕುಂದಾಪುರದ ಶ್ರೀ ಮಹಾಕಾಳಿ ಚಂಡೆ ತಂಡದಿಂದ ಚಂಡೆ ವಾದನ ನಡೆಯಿತು.