ಶಿರಸಿ: ಮದುವೆಯಾದ ಮೇಲಿನ ಸಮಸ್ಯೆ ಹೆಚ್ಚಿದೆ. ಅದಕ್ಕೆ ಕೌನ್ಸಿಲಿಂಗ ಮಾಡುವ ವ್ಯವಸ್ಥೆ ಯೋಚಿಸಲಾಗುತ್ತಿದೆ. ಈ ಭಾಗದಲ್ಲಿ ಸದಸ್ಯತ್ವ ಕೊರತೆ ಇದೆ. ಮುಂದಿನ ದಿನ ಹೆಚ್ಚಿಸುತ್ತೇವೆ. ಎಲ್ಲ ಬ್ರಾಹ್ಮಣ ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ, ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ, ಲೋಕಶಿಕ್ಷಣ ಟ್ರಸ್ಟ ಧರ್ಮದರ್ಶಿ ಅಶೋಕ ಹಾರ್ನಹಳ್ಳಿ ಹೇಳಿದರು.
ಅವರು ಶುಕ್ರವಾರ ಸಂಜೆ ತಾಲೂಕಿನ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಭೇಟಿ ನೀಡಿ, ಪೀಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದರ್ಶನ ಪಡೆದು ಆಶೀರ್ವಾದ, ಮಂತ್ರಾಕ್ಷತೆ ಸ್ವೀಕರಿಸಿ, ಮಹಾಸಭಾದ ಕಾರ್ಯಯೋಜನೆ ವಿವರಿಸಿದರು.ಶ್ರೀ ಸೋಂದಾ ಸ್ವರ್ಣವಲ್ಲೀ ಪೀಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಮಾತನಾಡುತ್ತಾ, ಸಂಘಟನೆ ಗಟ್ಟಿಮಾಡಿ ವಧುವರರ ಬಗ್ಗೆ ಗಮನ ಹರಿಸಿ, ಸೂಕ್ತ ವಯಸ್ಸಿಗೆ ವಿವಾಹ ಸಮಾಜದ ಸಮಸ್ಯೆ ದೂರ ಮಾಡಲು ಸಾಧ್ಯ. ಬ್ರಾಹ್ಮಣ ಪಂಗಡಗಳ ಮಧ್ಯೆಯ ಭಿನ್ನಾಭಿಪ್ರಾಯ ಇರಬಾರದು. ಎಲ್ಲ ಬ್ರಾಹ್ಮಣ ಸಮುದಾಯ ಒಂದೇ ಎನ್ನುವ ಭಾವನೆ ಬೇಕು, ಎಂದು ನುಡಿದರು. ಈ ಸಂದರ್ಭದಲ್ಲಿ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಪಾದ ರಾಯ್ಸದ ವಡ್ಡಿನಕೊಪ್ಪ ಹಾಗೂ ಇತರರು ಉಪಸ್ಥಿತರಿದ್ದರು.