• Slide
    Slide
    Slide
    previous arrow
    next arrow
  • ಮೇ.21ರಂದು ಸ್ವಾತಂತ್ರ್ಯವೀರ ಸಾವರಕರರ ತಿಥಿಗನುಸಾರ ಜಯಂತಿ, ಈ ನಿಮಿತ್ತ ವಿಶೇಷ ಲೇಖನ

    300x250 AD

    ಪ್ರಪ್ರಥಮಗಳ ಸರದಾರ – ಸಾವರಕರ
    1.‘ದೇಶಭಕ್ತಿಯ ಅಪರಾಧ’ಕ್ಕಾಗಿ ಭಾರತೀಯ ಮಾಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಪ್ರಪ್ರಥಮ ವಿದ್ಯಾರ್ಥಿ.
    2. ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿ ಇಟ್ಟು ಹೋಳಿ ಆಚರಿಸಿದ ಪ್ರಪ್ರಥಮ ಸ್ವದೇಶಾಭಿಮಾನಿ.
    3. ‘ಸ್ವರಾಜ್ಯ’ ಎಂದು ಹೇಳುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ ಸಂಪೂರ್ಣ ಸ್ವರಾಜ್ಯವೇ ಭಾರತದ ಲಕ್ಷ್ಯ ಎಂದು ಹೇಳಿದ ಪ್ರಪ್ರಥಮ ದೇಶಾಭಿಮಾನಿ.
    4. ದಾಸ್ಯ ರಕ್ಕಸನ ಎದೆ ಮೆಟ್ಟಲು ಪ್ರಯತ್ನಿಸಿದ್ದಕ್ಕಾಗಿ ತಾನು ಗಳಿಸಿದ ಬಿ.ಎ. ಪದವಿಯನ್ನು ಕಳೆದುಕೊಂಡ ಪ್ರಪ್ರಥಮ ಭಾರತೀಯ ವಿದ್ಯಾರ್ಥಿ.
    5. ಕ್ರಾಂತಿಕಾರಿ ಚಟುವಟಿಕೆಗೆ ತೊಡಗಿದ್ದಕ್ಕಾಗಿ ಬ್ರಿಟಿಷರಿಂದ ಬ್ಯಾರಿಸ್ಟರ್ ಪದವಿ ನಿರಾಕರಿಸಲ್ಪಟ್ಟ ಮೊಟ್ಟಮೊದಲ ಬ್ಯಾರಿಸ್ಟರ್. ಹಿಂದುಸ್ಥಾನದ ಸ್ವಾತಂತ್ರ್ಯದ ಪ್ರಶ್ನೆ ವಿದೇಶಗಳಲ್ಲೂ ಮಹತ್ವಗಳಿಸುವಂತೆ ಮಾಡಿದ ಪ್ರಪ್ರಥಮ ಭಾರತೀಯ.
    6. ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ (1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಬರೆದದ್ದು 24ರ ಹರೆಯದಲ್ಲಿ) ರಚಿಸಿದ ಜಗತ್ತಿನ ಪ್ರಪ್ರಥಮ ಲೇಖಕ.
    7. ಬ್ರಿಟಿಷರ ನ್ಯಾಯಾಲಯವನ್ನು ತಾನು ಪುರಸ್ಕರಿಸುವುದಿಲ್ಲವೆಂದು ಸಾರಿದ ಪ್ರಪ್ರಥಮ ರಾಜಕೀಯ ಕೈದಿ.
    8. ಜಗತ್ತಿನ ರಾಜಕೀಯ ಇತಿಹಾಸದಲ್ಲಿಯೇ ಹೇಗೆ ಅಂತರ್‌ರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಪ್ರಪ್ರಥಮ ರಾಜಕೀಯ ಕೈದಿ.
    9. ವಿಶ್ವ ರಾಜಕೀಯ ಇತಿಹಾಸದಲ್ಲಿ 50 ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಪ್ರಪ್ರಥಮ ರಾಜಕೀಯ ಕೈದಿ.
    10. ಬರೆಯಲು ಬೇಕಾದ ಕಾಗದ, ಪೆನ್ನು ಇತ್ಯಾದಿ ಸೌಲಭ್ಯಗಳೊಂದೂ ಇಲ್ಲದಿದ್ದರೂ ಬರವಣಿಗೆಯನ್ನು ನಿಷೇಧಿಸಲಾಗಿದ್ದರೂ, ಜೈಲಿನ ಗೋಡೆಗಳ ಮೇಲೆ ಮೊಳೆಯಿಂದಲೇ 10 ಸಾವಿರ ಸಾಲುಗಳ ಕಾವ್ಯ ರಚಿಸಿ ಕಂಠಪಾಠ ಮಾಡಿ, 14 ವರ್ಷಗಳ ಸೆರೆವಾಸದಿಂದ ಸುರಕ್ಷಿತವಾಗಿ ಹೊರಗೆ ಬಂದ ನಂತರ ಮತ್ತೆ ಅದನ್ನು ಬರೆದು ದೇಶಕ್ಕೆ ಅರ್ಪಿಸಿದ ವಿಶ್ವದ ಪ್ರಪ್ರಥಮ ಮಹಾಕವಿ.

    ನನ್ನ ಹತ್ತಿರ ಭಯಂಕರ ಆಯುಧಗಳಿವೆ: ಲಂಡನ್ ನಗರದಲ್ಲಿ ಒಂದು ದಿನ ಗುಪ್ತಚರರು ಸ್ವಾ. ಸಾವರಕರರನ್ನು ದಾರಿ ಮಧ್ಯದಲ್ಲಿ ನಿಲ್ಲಿಸಿ ಕೇಳಿದರು, “ಮಹಾಶಯರೇ, ಕ್ಷಮಿಸಿರಿ. ನಮಗೆ ನಿಮ್ಮ ಬಗ್ಗೆ ಸಂಶಯವಿದೆ. ನಿಮ್ಮ ಹತ್ತಿರ ಘಾತಕ ಆಯುಧಗಳಿವೆ ಎಂದು ನಿಶ್ಚಿತ ಸುಳಿವು ಸಿಕ್ಕಿದೆ. ಆದ್ದರಿಂದ ನಿಮ್ಮ ತಪಾಸಣೆಯನ್ನು ಮಾಡುತ್ತೇವೆ”. ಸಾವರಕರರು ನಿಂತರು, ಗುಪ್ತಚರರು ತಪಾಸಣೆ ಮಾಡಿದರು. ಆದರೆ ಏನೂ ಸಿಗಲಿಲ್ಲ. ಆಗ ಗುಪ್ತಚರರ ಪ್ರಮುಖ ಅಧಿಕಾರಿಗಳು ಕೇಳಿದರು, “ಕ್ಷಮಿಸಿರಿ ತಪ್ಪು ಸುದ್ದಿಯಿಂದಾಗಿ ನಿಮಗೆ ತೊಂದರೆ ನೀಡಿದೆವು”. ಆಗ ಸಾವರಕರರು ಹೇಳಿದರು, “ನಿಮಗೆ ಸಿಕ್ಕ ಸುಳಿವು ತಪ್ಪಲ್ಲ. ನನ್ನ ಬಳಿ ಘಾತಕ ಆಯುಧವಿದೆ”. ಜೇಬಿನಲ್ಲಿದ್ದ ಪೆನ್ನನ್ನು ತೋರಿಸಿ ಹೇಳಿದರು, “ನೋಡಿ ಇದೇ ಆ ಆಯುಧ, ಇದರಿಂದ ಹೊರ ಬರುವ ಒಂದೊಂದು ಶಬ್ಧ ಯುವಕರಿಗೆ ಅನ್ಯಾಯದ ವಿರುದ್ಧ ಹೋರಾಡುವ ಪ್ರೇರಣೆಯನ್ನು ನೀಡುತ್ತದೆ. ಈ ಶಬ್ಧಗಳಿಂದ ದೇಶಭಕ್ತರ ರಕ್ತ ಕುದಿಯುತ್ತದೆ ಮತ್ತು ಅವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಲು ಸಿದ್ಧರಾಗುತ್ತಾರೆ”.

    ಆಧಾರ : HinduJagruti.org

    300x250 AD

    ಸಂಗ್ರಹ
    ಶ್ರೀ ಶರತ್ ಕುಮಾರ್ ನಾಯ್ಕ್
    ಜಿಲ್ಲಾ ಸಮಿತಿ ಸಮನ್ವಯಕರು
    ಹಿಂದೂ ಜನಜಾಗೃತಿ ಸಮಿತಿ
    ಉತ್ತರ ಕನ್ನಡ ಜಿಲ್ಲೆ
    ಸಂಪರ್ಕ :9480567514

    Share This
    300x250 AD
    300x250 AD
    300x250 AD
    Leaderboard Ad
    Back to top