ಕಾರವಾರ: ಜಿಲ್ಲೆಯ ಯೋಜನಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಕೋ- ಆಪರೇಟಿವ್ ನಿಯಮಿತದ ಸಹಯೋಗದಲ್ಲಿ ಮೇ 23ರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2.30ರವರೆಗೆ ತಾರಿವಾಡಾ, ಸದಾಶಿವಗಡದ ದುರ್ಗಾದೇವಿ ದೇವಸ್ಥಾನದ ಹತ್ತಿರದ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಕೋ- ಆಪರೇಟಿವ್ ನಿಯಮಿತ ಗೌರಿನಿಕೇತನದ ಮುಖ್ಯ ಕಚೇರಿಯಲ್ಲಿ ಕಸ್ಟಮರ್ ಸರ್ವಿಸ್ ರಿಪ್ರೆಸೆಂಟೇಟಿವ್ ಹುದ್ದೆಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ.
ಆಸಕ್ತ ವಾಣಿಜ್ಯ ಪದವಿ ಹೊಂದಿದ ಪುರುಷ ಅಭ್ಯರ್ಥಿಗಳು ರೆಸ್ಯೂಮ್, ಆಧಾರ್ ಕಾರ್ಡ್, ಇತ್ತೀಚಿನ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ನೇರವಾಗಿ ಹಾಜರಾಗಬಹುದು. ಅಭ್ಯರ್ಥಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಮೊಬೈಲ್ ಸಂಖ್ಯೆ: 83100 44796, 80734 42382ಗೆ ಸಂಪರ್ಕಿಸಬಹುದು ಎಂದು ಯೋಜನಾ ಉದ್ಯೋಗ ವಿನಿಮಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.