ದಾಂಡೇಲಿ: ನಗರದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ವೀರರಾಣಿ ಬೆಳವಡಿ ಮಲ್ಲಮ್ಮರ ಪುತ್ಥಳಿ ನಿರ್ಮಿಸಲು ಸೂಕ್ತ ಜಾಗದ ವ್ಯವಸ್ಥೆ ಮಾಡಿಕೊಡಬೇಕೆಂದು ದಾಂಡೇಲಿ ತಾಲ್ಲೂಕಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಮೂಲಕ ಶುಕ್ರವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ದುಂಡಪ್ಪ ಪಾಟೀಲ ಮತ್ತು ಸಂಘಟನೆಯ ಪ್ರಮುಖರುಗಳಾದ ಪರಶುರಾಮ ಗೌಡರ, ಸುಧಾಕರ ವಾಡಕರ, ಮಂಜುನಾಥ ಉಪ್ಪಾರ, ಸಂಜು ಪವಾರ್, ಅಶೋಕ ಕೆ., ಕಾರ್ತಿಕ್ ಎ., ಬಸಪ್ಪಾ ಕೆ. ಹಾಗೂ ಗಣೇಶ್ ಬಿ. ಉಪಸ್ಥಿತರಿದ್ದರು.