ಶಿರಸಿ; ಆದರ್ಶ ಸುಗಮಸಂಗೀತ ಅಕಾಡೆಮಿ ಟ್ರಸ್ಟ್, (ರಿ) ಬೆಂಗಳೂರು ಕದಂಬ ಕಲಾವೇದಿಕೆ, ಶಿರಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರುಣೋದಯ ಟ್ರಸ್ಟ್ ಶಿರಸಿ ಹಾಗೂ ಮಿತ್ರಾ ಮ್ಯೂಸಿಕ್ ಶಿರಸಿ ಇವರ ಸಹಯೋಗದಲ್ಲಿ” ಕನ್ನಡೋತ್ಸವ,2022″ ಸುಗಮಸಂಗೀತ ತರಬೇತಿ ಸರಣಿ ಕಾರ್ಯಕ್ರಮ. ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಶಿರಸಿಯ ಅರುಣೋದಯ ತರಬೇತಿಕೇಂದ್ರದಲ್ಲಿ ಮೇ.21 ಶನಿವಾರ ಸಂಜೆ 5ರಿಂದ ಆಯೋಜಿಸಲಾಗಿದ್ದು ಸಂಜೆ -5:00 ರಿಂದ 5.30 ಸ್ವರಾಲಂಕೃತಿ ವಿದ್ವಾನ್ ಪ್ರಕಾಶ್ ಹೆಗಡೆ ಯಡಳ್ಳಿರವರಿಂದ ಹಾಗೂ 5:30 ರಿಂದ 6:00 ‘ಆರೋಗ್ಯ ಭಾಗ್ಯ’ ವಿಶೇಷ ಉಪನ್ಯಾಸ ಕಿಶೋರ ಸೂತ್ರ ಖ್ಯಾತಿಯ ಬೆಂಗಳೂರಿನ ಪ್ರಖ್ಯಾತ ವೈದ್ಯರಾದ ಡಾ.ಸಿ ಎ.ಕಿಶೋರ್ ಅವರಿಂದ ನಡೆಯಲಿದೆ.
ನಂತರ 6 ರಿಂದ 7 ಸುಗಮಸಂಗೀತ ತರಬೇತಿ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರಿಂದ ನಡೆಯಲಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಶಿರಸಿ ರತ್ನಾಕರ 9449371981 ಕದಂಬ ಕಲಾ ವೇದಿಕೆ ಶಿರಸಿ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದೆ.