ಜೊಯಿಡಾ; ತಾಲೂಕಿನ ಶ್ರೀಕ್ಷೇತ್ರ ಉಳವಿ ಚನ್ನಬಸವೇಶ್ವರ ಮಠದಲ್ಲಿ ಮೇ.25, 26 ರಂದು ಎರಡು ದಿನ ಚಿಂತನ ಕಮ್ಮಟ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆಯ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿ ಅವರು ಹೇಳಿದರು.
ದಾಂಡೇಲಿಯ ಸಂತೋಷ ಹೊಟೇಲ್ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಜಗದ್ಗುರು ಮರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ ಹಾಗೂ ಪರಿವರ್ತನಪರ ಧರ್ಮ ಸಂಸತ್ ವತಿಯಿಂದ ಉದಾತ್ತ ಚಿಂತನ, ಜಾಗೃತ ಜೀವನ ವಿಷಯಗಳ ಕುರಿತು ಧಾರ್ಮಿಕರಿಗಾಗಿ ಚಿಂತನ ಕಮ್ಮಟ ಕಾರ್ಯಕ್ರಮ ಆಯೋಜಿಸಲಾಗಿದೆ. ಧಾರ್ಮಿಕ ಶಿಬಿರದ ಅಧ್ಯಕ್ಷತೆಯನ್ನು ಚಿತ್ರದುರ್ಗದ ಶ್ರೀ ಜಗದ್ಗುರು ಮರುಘರಾಜೇಂದ್ರ ಬೃಹನ್ಮಠ, ಶೂನ್ಯಪೀಠಾಧ್ಯಕ್ಷರು, ತ್ರಿವಿಧ ದಾಸೋಹಿ ಡಾ. ಶಿವಮೂರ್ತಿ ಮರುಘಾ ಶರಣರು ವಹಿಸಲಿದ್ದಾರೆ.
ಜೊತೆಗೆ ರಾಜ್ಯದ ನೂರಕ್ಕೂ ಹೆಚ್ಚು ಮಠಾಧಿಶರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಎಲ್ಲ ಧಾರ್ಮಿಕರು ಚಿಂತನ ಕಮ್ಮಟ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಸುದ್ದಿಗೋಷ್ಟಿಯ ಮೊದಲು ಅವರು ಕಾರ್ಯಕ್ರಮದ ಪ್ರಾತ್ಯಕ್ಷಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಹಾವೇರಿಯ ಹೊಸಮಠದ ಶ್ರೀ ಬಸವಲಿಂಗ ಸ್ವಾಮಿ, ತಿರುವಳ್ಳಿಯ ಮುರುಘಾಮಠದ ಶ್ರೀ ಬಸವನಿಂರಜನ ಸ್ವಾಮೀಜಿ ಇತರರಿದ್ದರು.