ಭಟ್ಕಳ: ಅಕ್ರಮವಾಗಿ ವಾಹನವೊಂದರಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿರುವ ವೇಳೆ ಇಲ್ಲಿನ ಶಿರಾಲಿ ಚೆಕ್ ಪೋಸ್ಟ್ ನಲ್ಲಿ ವಾಹನ ತಡೆದು ಓರ್ವನನ್ನು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ.
ಸಯ್ಯದ್ ಮೊಹಿದ್ದೀನ್ ಅಲಿ ಬಂಧಿತ. ಇನ್ನೋರ್ವ ಗಜಬರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರಾದ ಇಬ್ರಾಹಿಂ ಹುಸೇನ್, ನಾಸೀರ್ ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ.
ಇವರು ಎಲ್ಲಿಯದ್ದೋ ಜಾನುವಾರನ್ನು ವಧೆ ಮಾಡಿ ಸುಮಾರು 80 ಸಾವಿರ ಮೌಲ್ಯದ 400 ಕೆಜಿ ದನದ ಮಾಂಸವನ್ನು ಟೊಯೋಟಾ ಇಟಿಯೋಸ್‌ನಲ್ಲಿ ಸಾಗಾಟ ಮಾಡುತ್ತಿದ್ದರು. ಈ ವೇಳೆ ಶಿರಾಲಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ದಾಳಿಯ ಸಂದರ್ಭದಲ್ಲಿ ಓರ್ವ ಆರೋಪಿ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ, ಇನ್ನೋರ್ವ ಪರಾರಿಯಾಗಿದ್ದಾನೆ.
ಈ ಕುರಿತು ಗ್ರಾಮೀಣ ಠಾಣೆ ಪಿಎಸ್‌ಐ ರತ್ನಾ ಕುರಿ ದೂರು ನೀಡಿದ್ದು, ಗ್ರಾಮೀಣ ಠಾಣಾ ಎಎಸ್‌ಐ ರಾಜೇಶ ಕೆ.ಕೊರಗಾ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.