• Slide
    Slide
    Slide
    previous arrow
    next arrow
  • ವಿವಿವಿ ಗುರುಕುಲಕ್ಕೆ ಶೇ.100 ಫಲಿತಾಂಶ

    300x250 AD

    ಗೋಕರ್ಣ: ಅಶೋಕೆಯ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠ, ರಾಜ್ಯ ಪ್ರೌಢಶಿಕ್ಷಣ ಮಂಡಳಿ ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ಪಡೆದಿದೆ. ಇದು ರಾಜ್ಯ ಪಠ್ಯಕ್ರಮದಲ್ಲಿ ವಿವಿವಿಯ ಪ್ರಥಮ ಬ್ಯಾಚ್ ಆಗಿದ್ದು, ಸಂಸ್ಥೆಗೆ ಕೀರ್ತಿ ತಂದ ಎಲ್ಲರನ್ನು ರಾಘವೇಶ್ವರ ಭಾರತೀಸ್ವಾಮೀಜಿ ಆಶೀರ್ವದಿಸಿದ್ದಾರೆ.

    ಪರೀಕ್ಷೆ ಬರೆದ 18 ವಿದ್ಯಾರ್ಥಿಗಳ ಪೈಕಿ 5 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ಉತ್ತೀರ್ಣರಾಗಿದ್ದಾರೆ. 12 ಮಂದಿ ಪ್ರಥಮ ದರ್ಜೆ ಮತ್ತು ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಪ್ರಾಚಾರ್ಯ ಮಹೇಶ್ ಹೆಗಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ. ಚೈತನ್ಯ ಕುರ್ಸೆ (599) ಮೊದಲನೇ ಸ್ಥಾನ ಗಳಿಸಿದ್ದು, ರಜತ್ ಭಟ್ (589) ದ್ವಿತೀಯ ಹಾಗೂ ಕಾರ್ತಿಕ್ ಎಂ.ನಾಯಕ್ (583) ತೃತೀಯ ಸ್ಥಾನ ಪಡೆದಿದ್ದಾರೆ. ಶ್ರವಣ್ ಮತ್ತು ಅನನ್ಯಾ ವಿ.ಮುದ್ಗುಣಿ ಡಿಸ್ಟಿಂಕ್ಷನ್ ಪಡೆದ ಇತರರು. ಚೈತನ್ಯ ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಹಾಗೂ ಸಮರ್ಥ್ ರಾಯ್ಕರ್ ಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.

    ವಿವಿವಿ ಗುರುಕುಲಗಳ ವರಿಷ್ಠಾಚಾರ್ಯ ಎಸ್.ಜಿ.ಭಟ್ ಕಬ್ಬಿನಗದ್ದೆ, ಪಾರಂಪರಿಕ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ, ವಿವಿವಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಿ.ಡಿ.ಶರ್ಮಾ, ವಿದ್ಯಾ ಪರಿಷತ್ ಅಧ್ಯಕ್ಷ ಡಾ.ಎಂ.ಆರ್.ಹೆಗಡೆ, ಉಪಾಧ್ಯಕ್ಷ ಮರುವಳ ನಾರಾಯಣ ಭಟ್ ಮತ್ತಿತರರು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದ್ದಾರೆ.

    300x250 AD

    ಕೋಟ್…

    ವಿವಿವಿ ಗುರುಕುಲಗಳ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳ ಸಾಧನೆಯಿಂದ ಅತೀವ ಸಂತಸವಾಗಿದೆ. ಶ್ರೀಕರಾರ್ಚಿತ ದೇವರ ಅನುಗ್ರಹದಿಂದ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ. ಇದಕ್ಕೆ ಕಾರಣರಾದ ಎಲ್ಲ ಆರ್ಯ- ಆರ್ಯೆಯರು ಮತ್ತು ಪ್ರಾಚಾರ್ಯರು ಅಭಿನಂದನಾರ್ಹರು.–· ರಾಘವೇಶ್ವರ ಭಾರತೀ ಸ್ವಾಮೀಜಿ


    Share This
    300x250 AD
    300x250 AD
    300x250 AD
    Leaderboard Ad
    Back to top