ಸಿದ್ದಾಪುರ: ತಾಲೂಕಿನ ಶ್ರೀ ಮಹಾಗಣಪತಿ ಪ್ರೌಢಶಾಲೆ ಕಿಬ್ಬಳ್ಳಿಯ ಆದಿತ್ಯ ರಮೇಶ್ ಹೆಗಡೆ ಶಿರಗೋಡಬೈಲ್ 625 ಅಂಕಗಳಿಗೆ 621 ಅಂಕ ಗಳಿಸಿ ರಾಜ್ಯಕ್ಕೆ 5 ನೇ ಸ್ಥಾನ ಗಳಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾನೆ. ಪನ್ನಗ ಶಂಕರನಾರಾಯಣ ಹೆಗಡೆ 616 ಅಂಕ ಗಳಿಸಿ ಶಾಲೆಗೆ ದ್ವಿತೀಯ ಸ್ಥಾನ ಪಡೆದರೆ, ಹರೀಶ ಶ್ರೀಧರ ಹೆಗಡೆ ಶಿರಗೋಡಬೈಲ್ 589 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾನೆ.
ಶಾಲಾ ಗುಣಾತ್ಮಕ ಫಲಿತಾಂಶ 88% ಆಗಿದ್ದು, ಉತ್ತೀರ್ಣತಾ ಫಲಿತಾಂಶ 95% ಆಗಿದೆ. ಗಣಿತ ಹಾಗೂ ವಿಜ್ಞಾನ ಹಾಗೂ ಇಂಗ್ಲಿಷ್ ತೃತೀಯ ಭಾಷೆ ಕನ್ನಡ ವಿಷಯದಲ್ಲಿ 1 ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ 5 ವಿದ್ಯಾರ್ಥಿಗಳು 100 ಕ್ಕೆ ನೂರು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.ಇವರ ಸಾಧನೆಗಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕರ ವೃಂದ ಅಭಿನಂದನೆ ಸಲ್ಲಿಸಿ ಶುಭಕೋರಿದೆ.