• first
    second
    third
    previous arrow
    next arrow
  • ಬಿದ್ರಕಾನ ಪ್ರೌಢಶಾಲೆ: ಶೇಕಡಾ 95 ಸಾಧನೆ

    300x250 AD

    ಸಿದ್ದಾಪುರ; 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ತಾಲೂಕಿನ ಎಂ.ಜಿ.ಸಿ.ಎಂ. ಪ್ರೌಢಶಾಲೆ, ಬಿದ್ರಕಾನ A ಗ್ರೇಡ್ ಸಾಧನೆ ಮಾಡಿದೆ. ಪ್ರೌಢಶಾಲೆಯ ಪರಿಮಾಣಾತ್ಮಕ ಫಲಿತಾಂಶ 95% ಮತ್ತು ಗುಣಾತ್ಮಕ ಫಲಿತಾಂಶ 87.28% ಆಗಿದೆ.
    15 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಮತ್ತು 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಉತ್ತಮ ಗುಣಾತ್ಮಕ ಫಲಿತಾಂಶವನ್ನು ನೀಡಿದ್ದಾರೆ.

    ಪ್ರೌಢಶಾಲೆಗೆ ಪ್ರಥಮ ಸ್ಥಾನವನ್ನು ಸಚಿನ ಗಿರೀಶ ಹೆಗಡೆ ಇವನು ಪಡೆದಿದ್ದು 625 ಕ್ಕೆ 614 ಅಂಕಗಳನ್ನು ಗಳಿಸಿ, 98.28 % ಪಡೆದಿದ್ದಾನೆ. ದ್ವಿತೀಯ ಸ್ಥಾನವನ್ನು ಕುಸುಮಾಕರ ಮಂಜುನಾಥ ಚನ್ನಯ್ಯ ಇವನು ಪಡೆದಿದ್ದು 608 ಅಂಕ ಗಳಿಸುವ ಮೂಲಕ 97.28% ಅಂಕ ಪಡೆದಿರುತ್ತಾನೆ. ತೃತೀಯ ಸ್ಥಾನ ಅಶ್ವಿನಿ ವೆಂಕಟಗಿರಿ ಹೆಗಡೆ -604 ಅಂಕಗಳು 96.6%, ನಾಲ್ಕನೇ ಸ್ಥಾನವನ್ನು ಮಂಜುಳಾ ಮಧುಕರ ರಾಯ್ಕರ್ 603 – 96.4 % ಅಂಕಗಳು ಮತ್ತು ಐದನೇ ಸ್ಥಾನವನ್ನು ಚೈತ್ರಾ ಕುಮಾರ ನಾಯ್ಕ – 593 – 94.88% ಅಂಕಗಳನ್ನು ಪಡೆಯುವ ಮೂಲಕ ಪ್ರೌಢಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

    300x250 AD

    ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿ, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top