ಶಿರಸಿ: ದಿ ತೋಟಗಾರ್ಸಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಸುಪರ್ ಮಾರ್ಕೆಟ್‍ನಲ್ಲಿ ಆಯೋಜಿಸಿದ್ದ Year End Dhamaka Lucky Dip ನ ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಗುರುವಾರ ಸಂಘದ ಆವಾರದಲ್ಲಿ ನಡೆಯಿತು.
ಲಕ್ಕಿ ಡಿಪ್ ಬಂಪರ್ ಬಹುಮಾನವಾದ ಮಾರುತಿ ಬಲೆನೋ ಕಾರ್ ವಿಜೇತ ಗಣಪತಿ ಗಜಾನನ ಜೋಶಿ ಕೂಗಲಬಳ್ಳಿ ಮಠ, ದ್ವಿತೀಯ ಬಹುಮಾನವಾದ ಯಾಕುಝಾ ಇಲೆಕ್ಟ್ರಿಕ್ ಸ್ಕೂಟರ್ ವಿಜೇತರುಗಳಾದ ರಾಜಾರಾಮ ಜಿ. ಹೆಗಡೆ ಮತ್ತಿಹಳ್ಳಿ ಹಾಗೂ ವಿಶ್ವಾಸ ಪುಂಡಲೀಕ ಬಲ್ಸೆ ಚವತ್ತಿ ಬಹುಮಾನ ಸ್ವೀಕರಿಸಿದರು.
ಸಂಘದ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಹಾಗೂ ಆಡಳಿತ ಮಂಡಳಿ ನಿರ್ದೇಶಕರುಗಳು ಬಹುಮಾನ ವಿತರಿಸಿದರು. ಲಕ್ಕಿ ಡಿಪ್‍ನ ತೃತೀಯ ಬಹುಮಾನವಾದ ಗೋದ್ರೆಜ್ ರೆಫ್ರಿಜರೇಟರ್ ವಿಜೇತರುಗಳಾದ ಗಣಪತಿ ರಾಮಚಂದ್ರ ಹೆಗಡೆ ಸೋಂದಾ, ದಿವಾಕರ ರಾಮಚಂದ್ರ ಹೆಗಡೆ ಹುಕ್ಲಕೈ, ಹರೀಶ ಆರ್. ನಾಯ್ಕ ಹಂಗಾರಖಂಡ, ರಾಜಗೋಪಾಲ ನಾಯ್ಡು, ಶ್ರೀಕಾಂತ ಚಂದ್ರಶೇಖರ ಭಟ್ಟಊರಮುಂದೆ, ಶ್ರೀಕಾಂತ – ಶ್ರೀ ಶಾರದಾ ಸ್ಟೋರ್ಸ್, ಮಧುಕರ ಶ್ರೀಧರ ಹೆಗಡೆ ಹೂಡ್ಲಮನೆ ಹಾಗೂ ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸಹಕಾರಿ ಸಂಘ ಯಲ್ಲಾಪುರ ಇವರುಗಳಿಗೆ ಬಹುಮಾನ ವಿತರಿಸಲಾಯಿತು.
ಡಿ.9, 2021 ರಿಂದ ಮಾ.31, 2022 ರವರೆಗೆ 10 ಗ್ರಾಂ ಚಿನ್ನ ಖರೀದಿ, ಪ್ರತಿ ಎರಡು ಚೀಲ ಧಾರಾ ಪಶು ಆಹಾರ ಖರೀದಿ, 2,499/-ಕ್ಕೂ ಮೇಲ್ಪಟ್ಟ ಬಟ್ಟೆ ಖರೀದಿಗೆ ಹಾಗೂ ಟಿ.ವಿ. ಫ್ರಿಜ್, ವಾಶಿಂಗ್ ಮಶಿನ್ ಖರೀದಿಗೆ ತಲಾ ಒಂದರಂತೆ ಕೂಪನ್‍ಗಳನ್ನು ಶಿರಸಿ, ಸಿದ್ದಾಪುರ, ಯಲ್ಲಾಪುರ ಮುಂಡಗೋಡ ಹಾಗೂ ಪ್ರಾಂಚೈಸಿ ಸುಪರ್ ಮಾರ್ಕೆಟ್‍ಗಳಲ್ಲಿಯೂ ನೀಡಲಾಗಿತ್ತು. ಸದರಿ ಕೂಪನ್‍ಗಳನ್ನು ಸೇರಿಸಿ ಟಿ.ಎಸ್.ಎಸ್. ಆವಾರದಲ್ಲಿ ಲಕ್ಕಿ ಡ್ರಾ ಮೂಲಕ ವಿಜೇತರನ್ನುಆಯ್ಕೆ ಮಾಡುವ ಪ್ರಕ್ರಿಯೆ ನಡೆದಿತ್ತುಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.