
ಶಿರಸಿ: ಮಾರ್ಚ/ಎಪ್ರಿಲ್ 2022 ರಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿರಸಿಯ ನರೇಬೈಲ್‍ನ ಮಿಯಾಡ್ರ್ಸ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನೂರಕ್ಕೆ ನೂರರ ಫಲಿತಾಂಶ ಮತ್ತು ರಾಜ್ಯ ಮಟ್ಟದ 14 ಸ್ಥಾನ ಗಳಿಸಿದೆ. ಸತತ 10 ನೇ ಬಾರಿಯ ನೂರಕ್ಕೆ ನೂರರ ಫಲಿತಾಂಶದ ಸಾಧನೆಯಾಗಿರುವುದು ವಿಶೇಷ.
ಪರೀಕ್ಷೆಗೆ ಕುಳಿತ 61 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ಮತ್ತು 15 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅನುದೀಪ್ ಹೆಗಡೆ (624/625 ,99.84%) ಮತ್ತು ಯಶಸ್ವಿನಿ ಹೆಗಡೆ (624/625, 99.84%) ಶಾಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನ, ಅನಂತ ಹೆಗಡೆ – (623/625,99.68%) ಶಾಲೆಗೆ ದ್ವಿತೀಯ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನ, ಪೂರ್ಣಚಂದ್ರ ಭಟ್,ಪ್ರಣತಿ ನಾಯ್ಕ,ಪ್ರೇರಣಾ ಹೆಗಡೆ (622/625,99.52%) ಶಾಲೆಗೆ ತೃತೀಯ ಹಾಗೂ ರಾಜ್ಯಕ್ಕೆ ನಾಲ್ಕನೇ ಸ್ಥಾನ, ಭೂಮಿಕಾ ಕೆ.ಸಿ,ಪೂರ್ಣಚಂದ್ರ ಹೆಗಡೆ (621/625 ,99.36%) ಶಾಲೆಗೆ ನಾಲ್ಕನೇ ಹಾಗೂ ರಾಜ್ಯಕ್ಕೆ ಐದನೇ ಸ್ಥಾನ, ಕೃತಿಕಾ ಭಟ್ (619/625 ,99.04%) ಶಾಲೆಗೆ ಐದನೇ ಹಾಗೂ ರಾಜ್ಯಕ್ಕೆ ಏಳನೇ ಸ್ಥಾನ,ಆರ್ಯನ್ ಹೆಗಡೆ,ದೀಕ್ಷಾ ಭಟ್(618/625,98.88%) ಶಾಲೆಗೆ ಆರನೇ ಹಾಗೂ ರಾಜ್ಯಕ್ಕೆ ಎಂಟನೇ ಸ್ಥಾನ,ಆದಿತ್ಯ ಹೆಗಡೆ,ವೈಷ್ಣವಿ ಹೆಗಡೆ(617/625 ,98.72%)ಶಾಲೆಗೆ ಏಳನೇ ಹಾಗೂ ರಾಜ್ಯಕ್ಕೆ ಒಂಭತ್ತನೇ ಸ್ಥಾನ, ಅಂಕಿತ್ ಹೆಗಡೆ(616/625, 98.56%) ಶಾಲೆಗೆ ಎಂಟನೇ ಸ್ಥಾನ ಹಾಗೂ ರಾಜ್ಯಕ್ಕೆ ಹತ್ತನೇ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪಾಲಕರು ಅಭಿನಂದಿಸಿದ್ದಾರೆ.