• Slide
    Slide
    Slide
    previous arrow
    next arrow
  • ಗುಣಮಟ್ಟದ ಫಲಿತಾಂಶ, ಸಂಸ್ಕೃತಿ ಮುಂದುವರಿಸಿದ ಶಿರಸಿ ಲಯನ್ಸ್ ಪ್ರೌಢಶಾಲೆ; ರಾಜ್ಯಮಟ್ಟದಲ್ಲಿ 9 ಸ್ಥಾನ;100% ಫಲಿತಾಂಶ

    300x250 AD

    ಶಿರಸಿ: 2021-22 ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶಿರಸಿಯ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ರಾಜ್ಯದ ಮೊದಲ ಹತ್ತು ಸ್ಥಾನಗಳಲ್ಲಿ 9 ವಿದ್ಯಾರ್ಥಿಗಳು ಸ್ಥಾನಗಳಿಸಿ, ಶಾಲೆಯ ರ್ಯಾಂಕ್ಸ್ ಸಂಸ್ಕøತಿಯು ಮುಂದುವರೆಸಿದ್ದಾರೆ. ಶಿರಸಿ ಲಯನ್ಸ್ ಶಾಲೆಯು ಕಳೆದ 9 ವರ್ಷಗಳಿಂದ ಸತತ ರಾಜ್ಯಮಟ್ಟದ 10 ಸ್ಥಾನದಲ್ಲಿ 5 ಕ್ಕಿಂತ ಅಧಿಕ ಸ್ಥಾನ ಪಡೆಯುತ್ತಾ ಬಂದಿದೆ.

    625ಕ್ಕೆ 624 ಅಂಕಗಳಿಸಿದ ಧನ್ಯಾ ಪ್ರಭಾಕರ ಭಟ್ ರಾಜ್ಯಮಟ್ಟದಲ್ಲಿ 2 ನೇ ಸ್ಥಾನ ಹಾಗೂ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
    622 ಅಂಕ ಗಳಿಸಿರುವ ನಿಶಾಂತ ರಾಜು ದೇವಾಡಿಗ, ಅಭಿಷೇಕ ರಾಕೇಶ ಹೆಗಡೆ ಹಾಗೂ ಚಿನ್ಮಯ ಜಿ. ಭಟ್ ಇವರುಗಳು ರಾಜ್ಯಮಟ್ಟದಲ್ಲಿ 3 ನೇ ಸ್ಥಾನ ಹಾಗೂ ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

    621 ಅಂಕಗಳಿಸಿರುವ ನೇಹಲ್ ಮಯೂರ್ ದಿವಾಕರ, ಸನ್ಮತಿ ಹೆಗಡೆ, ಶ್ರಾವ್ಯ ಹೆಗಡೆ ಇವರುಗಳು ರಾಜ್ಯಕ್ಕೆ 5 ನೇ ಸ್ಥಾನ ಹಾಗೂ ಶಾಲೆಗೆ ತೃತೀಯ ಸ್ಥಾನಗಳಿಸಿರುತ್ತಾರೆ. 620 ಅಂಕಗಳಿಸಿರುವ ರಮ್ಯಾ ರವೀಂದ್ರ ಹೆಗಡೆ ರಾಜ್ಯಮಟ್ಟದಲ್ಲಿ 6 ನೇ ಸ್ಥಾನ ಹಾಗೂ ಶಾಲೆಗೆ ನಾಲ್ಕನೇಯ ಸ್ಥಾನ ಗಳಿಸಿ ಕೀರ್ತಿ ತಂದಿರುತ್ತಾರೆ.

    300x250 AD

    618 ಅಂಕಗಳೊಂದಿಗೆ ಭಾವನಾ ಮಂಜುನಾಥ ಭಟ್ ರಾಜ್ಯಕ್ಕೆ 8 ನೇ ಸ್ಥಾನ, ಶಾಲೆಗೆ ಐದನೇಯ ಸ್ಥಾನ ಪಡೆದಿರುತ್ತಾರೆ. ಶಾಲೆಯಿಂದ ಪರೀಕ್ಷೆಗೆ ಕುಳಿತ 72 ವಿದ್ಯಾರ್ಥಿಗಳಲ್ಲಿ 95 ಪ್ರತಿಶತಕ್ಕಿಂತ ಅಧಿಕ ಅಂಕಗಳನ್ನು 20 ವಿದ್ಯಾರ್ಥಿಗಳು, 90% ಅಧಿಕ ಅಂಕಗಳನ್ನು 30 ವಿದ್ಯಾರ್ಥಿಗಳು, 85% ಅಧಿಕ ಅಂಕಗಳನ್ನು 44 ವಿದ್ಯಾರ್ಥಿಗಳು ಪಡೆದಿದ್ದು, ಪ್ರಥಮ ವರ್ಗದಲ್ಲಿ 71 ವಿದ್ಯಾರ್ಥಿಗಳು, ದ್ವಿತೀಯ ವರ್ಗದಲ್ಲಿ ಓರ್ವ ವಿದ್ಯಾರ್ಥಿ ತೇರ್ಗಡೆಯಾಗಿರುತ್ತಾರೆ. A+ ಶ್ರೇಣಿ 30 ವಿದ್ಯಾರ್ಥಿಗಳು, A ಶ್ರೇಣಿ 23 ವಿದ್ಯಾರ್ಥಿಗಳು ಪಡೆದಿರುತ್ತಾರೆ. ವಿಷಯವಾರು ಇಂಗ್ಲೀಷ್‍ನಲ್ಲಿ 3, ಕನ್ನಡ 16, ಹಿಂದಿ 14, ಸಂಸ್ಕøತ 10 ಗಣಿತ 10, ವಿಜ್ಞಾನ 5, ಸಮಾಜ ವಿಜ್ಞಾನ 15 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಈ ಸಾಧನೆಗೆ ಆಡಳಿತ ಮಂಡಳಿಯು ಸಾಧಕ ವಿದ್ಯಾರ್ಥಿಗಳನ್ನು, ಪಾಲಕರನ್ನು, ಶಿಕ್ಷಕರನ್ನು, ಶಿಕ್ಷಕೇತರ ಸಿಬ್ಬಂದಿಗಳನ್ನು ಅಭಿನಂದಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top