
ಶಿರಸಿ: ಇಲ್ಲಿನ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಗೆ ರಾಜ್ಯಕ್ಕೆ ಮೊದಲ ಎರಡು ಸ್ಥಾನ ಬಂದಿದ್ದು, ಚಿರಾಗ ಮಹೇಶ ನಾಯ್ಕ ಪ್ರಥಮ ಸ್ಥಾನಗಳಿಸಿದ್ದಾನೆ.
ಚಿರಾಗ ಮಹೇಶ ನಾಯ್ಕ 625 ಕ್ಕೆ 625 ಅಂಕ ಪಡೆದು ಸಾಧನೆ ತೋರಿದ್ದಾನೆ. ಚಿರಾಗ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದ ಮಹೇಶ ನಾಯ್ಕ ಹಾಗೂ ಹೇಮಾವತಿ ನಾಯ್ಕ ಅವರ ಪುತ್ರನಾಗಿದ್ದಾನೆ.
ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ದೀಕ್ಷಾ ರಾಜು ನಾಯ್ಕ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ದೀಕ್ಷಾ ಅವರ ತಂದೆ ರಾಜು ನಾಯ್ಕ ಪೇಂಟರ್ ಆಗಿ ಉದ್ಯೋಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಮಾರಿಕಾಂಬಾ ಪ್ರೌಢಶಾಲೆಯ ಮುಖ್ಯಾಧ್ಯಾಪಕ ನಾಗರಾಜ ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ.