ಅಂಕೋಲಾ: ಇತ್ತೀಚೆಗೆ ಪಟ್ಟಣದ ಪಿ.ಎಂ ಜ್ಯೂನಿಯರ್ ಕಾಲೇಜು ಆವಾರದಲ್ಲಿ ಮಂಗಳೂರಿನ ಜಸ್ಟಿಸ್ ಕೆ.ಎಸ್.ಹೆಗಡೆ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು.
ಈ ಶಿಬಿರದಲ್ಲಿ ಮಧುಮೇಹ ತಪಾಸಣೆ, ರಕ್ತದೊತ್ತಡ, ಇಸಿಜಿ ಹಾಗೂ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. ತಜ್ಞ ವೈದ್ಯರು ಜನಸಾಮಾನ್ಯರ ಕಾಯಿಲೆಯ ಬಗ್ಗೆ ತಪಾಸಣೆ ನಡೆಸಿ ಸಲಹೆ ನೀಡಿದರು.
ಈ ಕಾರ್ಯಕ್ರಮವು ಅಂಕೋಲಾದ ಕನ್ನಡ ವೈಶ್ಯ ವೆಲ್‍ಫೇರ್ ಟ್ರಸ್ಟ್, ನಿಸರ್ಗ ಸಂಪನ್ಮೂಲ ಕೇಂದ್ರ, ಸಂಜೀವಿನಿ ಸ್ವ-ಸಹಾಯ ಸಂಘಗಳ ಒಕ್ಕೂಟ, ಬಾಳೆಗುಳಿ ಸಂಗಮ ಸಂಸ್ಥೆ, ಶಿರಸಿ ಕದಂಬ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿಯವರು ಕಾರ್ಯಕ್ರಮ ಸಂಯೋಜಿಸಿದ್ದರು.