• Slide
    Slide
    Slide
    previous arrow
    next arrow
  • ಗ್ರಾಮ ಒನ್ ಕೇಂದ್ರ ಆರಂಭಿಸಲು ಅರ್ಜಿ ಆಹ್ವಾನ

    300x250 AD

    ಕಾರವಾರ: ಜಿಲ್ಲೆಯ 29 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಫ್ರಾಂಚೈಸಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯತಿಗಳಿದ್ದು, ಅದರಲ್ಲಿ 198 ಪಂಚಾಯತಗಳಲ್ಲಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಂಡು ಕಾರ್ಯಾರಂಭಿಸಿದೆ. ಉಳಿದ ಅಂಕೋಲಾ ತಾಲೂಕಿನ ಮೊಗಟಾ, ಡೋಂಗ್ರಿ, ಹಟ್ಟಿಕೇರಿ, ಭಟ್ಕಳ ತಾಲೂಕಿನ ಬೆಳ್ಕೆ, ಹೊನ್ನಾವರ ತಾಲೂಕಿನ ಬಳಕೂರು, ಕಾರವಾರ ತಾಲೂಕಿನ ಚೆಂಡಿಯಾ, ವೈಲವಾಡಾ, ಕೆರವಡಿ, ಸಿದ್ದಾಪುರ ತಾಲೂಕಿನ ಕಾವಂಚೂರ, ತಂಡಾಗುಂಡಿ, ಹಾರ್ಸಿಕಟ್ಟಾ, ಹಸರಗೋಡ, ಶಿರಸಿ ತಾಲೂಕಿನ ಶಿವಳ್ಳಿ, ಸಾಲ್ಕಣಿ, ಮಂಜಗುಣಿ, ಜಾನ್ಮನೆ, ಗುಡ್ನಾಪುರ, ಇಟಗುಳಿ, ಸುಗಾವಿ, ಮೇಲಿನ ಓಣಿಕೇರಿ, ಜೊಯಿಡಾ ತಾಲೂಕಿನ ಗಾಂಗೋಡಾ, ಬಜಾರಕುಣಂಗ, ನಾಗೋಡಾ, ಉಳವಿ, ಯಲ್ಲಾಪುರ ತಾಲೂಕಿನ ಕಣ್ಣಿಗೇರಿ, ಹಿತ್ಲಳ್ಳಿ, ದೇಹಳ್ಳಿ, ಹಾಸಣಗಿ, ವಜ್ರಳ್ಳಿಗಳಲ್ಲಿ ಗ್ರಾಮ್ ಒನ್ ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.

    300x250 AD

    ಆಸಕ್ತರು ಮೇ 25ರೊಳಗಾಗಿ ವೆಬ್‍ಸೈಟ್ https://www.karnatakaone.gov.in/public/GramonefranchiseeTerms ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top