• first
  second
  third
  previous arrow
  next arrow
 • ಕುಮಟಾ ಪತ್ರಕರ್ತರ ತಂಡಕ್ಕೆ ‘ಮೀಡಿಯಾ ಕಪ್- 2022’

  300x250 AD

  ಕಾರವಾರ: ಇಲ್ಲಿನ ಮಾಲಾದೇವಿ ಮೈದಾನದಲ್ಲಿ ನಡೆದ ‘ಮೀಡಿಯಾ ಕಪ್- 2022’ನಲ್ಲಿ ಚಾಂಪಿಯನ್ಸ್ ಆಗಿ ಕುಮಟಾ ಪತ್ರಕರ್ತರ ತಂಡ ಹೊರಹೊಮ್ಮಿತು.

  ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಕುಮಟಾ ತಂಡದವರು ಕಾರವಾರ ಪತ್ರಕರ್ತರ ‘ಎ’ ತಂಡವನ್ನು ಹತ್ತು ರನ್‍ಗಳ ಅಂತರಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಕುಮಟಾ ಟೀಮ್ 102 ರನ್ ಕಲೆ ಹಾಕಿತು. ವಿರಾಜ್, ವರದರಾಜ್, ನಾಗರಾಜ್, ನಟರಾಜ್ ಉತ್ತಮ ಬ್ಯಾಟಿಂಗ್ ಮಾಡಿ 8 ಓವರ್ ಪಂದ್ಯದಲ್ಲಿ 5 ವಿಕೆಟ್ ಕಳೆದು ಕೊಂಡು ಉತ್ತಮ ಮೊತ್ತ ಕಲೆ ಹಾಕಿತು. 103 ರನ್ ಬೆನ್ನಟ್ಟಿದ ಕಾರವಾರ ತಂಡದವರು ಮೊದಲ 5 ಓವರ್‍ಗಳಲ್ಲಿ 56 ರನ್ ಮಾಡಿ ಭರವಸೆ ಮೂಡಿಸಿದ್ದರು.ಆರಂಭಿಕ ಆಟಗಾರರಾದ ಸತೀಶ್, ನಿತಿನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಕುಮಟಾದ ನಾಗರಾಜ್ ನಾಯ್ಕ ಅತ್ತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಸತೀಶ್ ಅವರ ವಿಕೆಟ್ ಪಡೆದರು.

  ನಂತರ ಬಂದ ರಜನಿಕಾಂತ ಸಹ ಒಂದು ಬೌಂಡರಿ ಭಾರಿಸಿ ಔಟಾದರು. ನಂತರ ಬಂದ ಬ್ಯಾಟ್ಸಮನ್ ಸಹ ಒಂದು ಬೌಂಡರಿ ಭಾರಿಸಿ ಔಟಾದರು. ಕೊನೆಯ ಓವರ್‍ನಲ್ಲಿ 18 ರನ್ ಅವಶ್ಯಕತೆ ಬಿತ್ತು. ಈ ಒತ್ತಡಕ್ಕೆ ಸಿಲುಕಿದ ಕಾರವಾರ ತಂಡ ವಿಕೆಟ್ ಕಳೆದುಕೊಂಡಿತು. ಕುಮಟಾದ ವರದರಾಜ್ ಉತ್ತಮ ಬೌಲಿಂಗ್ ಮಾಡಿ ಕಾರವಾರ ತಂಡವನ್ನು ಕಟ್ಟಿಹಾಕಿದರು. 10 ರನ್ ಬೇಕಾಗಿದ್ದಾಗ ಎಲ್ಲಾ ಓವರ್ ಮುಕ್ತಾಯವಾದವು. 93 ರನ್ ಗಳಿಸಿದ ಕಾರವಾರ ತಂಡ ರನ್ನರ್ ಅಪ್ ಆಯಿತು.

  300x250 AD

  ಸೆಮಿಫೈನಲ್ ಪಂದ್ಯ ಟೈ :

  ಸೆಮಿಫೈನಲ್ ಪಂದ್ಯದಲ್ಲಿ ಭಟ್ಕಳ ತಂಡ 86 ರನ್ ಮೊತ್ತ ಕಲೆ ಹಾಕಿತ್ತು. 8 ಓವರ್‍ಗಳಲ್ಲಿ ಕುಮಟಾ ತಂಡ ಸಹ 86 ರನ್ ಬಾರಿಸಿ ಪಂದ್ಯ ಟೈ ಆಗುವಂತೆ ನೋಡಿಕೊಂಡಿತು. ನಟರಾಜ್ ಮತ್ತು ವಿರಾಜ್ ಕ್ರೀಜ್‍ನಲ್ಲಿದ್ದು ಕೊನೆಯ ಓವರ್‍ಗೆ 13 ರನ್ ಬೇಕಿದ್ದಾಗ, 12 ರನ್ ಗಳಿಸಿ ಪಂದ್ಯ ಟೈ ಆಗುವಂತೆ ಮಾಡಿದರು. ಆಗ ಸುಪರ್ ಓವರ್ ಮೂಲಕ ಭಟ್ಕಳ ಹಾಗೂ ಕುಮಟಾದ ಗೆಲುವು ನಿರ್ಧರಿಸಲು ಅಂಪೈರಗಳು ನಿರ್ಧರಿಸಿದರು. ಸುಪರ್ ಓವರ್ ನಲ್ಲಿ ಮೊದಲು ಆಡಿದ ಕುಮಟಾದ ಬ್ಯಾಟ್ಸಮನ್‍ಗಳು 14 ರನ್ ಗಳಿಸಿದರು. ಒಂದು ಓವರ್‍ನಲ್ಲಿ ಭಟ್ಕಳ ತಂಡ 15 ರನ್ ಗಳಿಸಬೇಕಿತ್ತು. ಆದರೆ ವರದರಾಜ್ ಅವರ ಬಿಗಿ ಬೌಲಿಂಗ್ ಕಾರಣ ಭಟ್ಕಳ ತಂಡ ನಾಲ್ಕು ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು. ಈ ಪಂದ್ಯ ವೀಕ್ಷಕರಿಗೆ ರೋಚಕ ವಾತಾವರಣ ಸೃಷ್ಟಿಸಿತ್ತು. ಈ ಮೂಲಕ ಫೈನಲ್ ಪ್ರವೇಶಿಸಿದ ಕುಮಟಾ ತಂಡ ಅಲ್ಲಿ ಸಹ ಗೆಲುವು ಸಾಧಿಸಿತು.

  Share This
  300x250 AD
  300x250 AD
  300x250 AD
  Back to top