ಹಳಿಯಾಳ: ರಾಜ್ಯ ಬುಡೋ ಮಾರ್ಷಲ್ ಆಟ್ಸ್ ಅಸೋಸಿಯೇಷನ್ ಮತ್ತು ಶೋಟೋಕಾನ ಕರಾಟೆ ಇಂಟನ್ಯಾಷನಲ್ ಆರ್ಗನೈಸೇಶನ್ ಸಹಯೋಗದಲ್ಲಿ ನಡೆದ ಎರಡನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ಮಂಜು ಕರಾಟೆ ಸ್ಕೂಲ್ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ,
ದಾವಣಗೆರೆಯಲ್ಲಿ ಆಯೋಜಿಸಲಾದ ಪಂದ್ಯಾವಳಿಯಲ್ಲಿ ಕಟಾ (ಕಾಲ್ಪನಿಕ ಯುದ್ಧ) ವಿಭಾಗದಲ್ಲಿ ಶ್ರೀಧರ್ ಹಡಪದ, ಕೀರ್ತನ ಅಸಂಗಿ, ಅಭಿಷೇಕ ಯತನೂರ, ಭೂಮಿಕಾ ಗರಗ, ಅಕ್ಷತಾ ಅಂಗೋಳ್ಳಿ, ಪೃಥ್ವಿ ಬಾಲನ್ನವರ ಪ್ರಥಮ ಸ್ಥಾನ ಹಾಗೂ ಪ್ರಗತಿ ಉಳಬುತ್ತೆ, ಭಕ್ತಿ ದೊಡ್ಡಮನಿ ಸಿದ್ದೇಶ್ವರ ಮಡಿವಾಳ, ಸುಜಯ ವಾಡ್ಲೆಕರ, ಶಮೀನಾ ಹದಲಿ, ಅಲಫಾಜ ಮುನವಳ್ಳಿ, ಸಂತೋಷ ತಳವಾರ ಅಖಿಲ ಪೆಚರು ದ್ವಿತೀಯ ಸ್ಥಾನ ಮತ್ತು ಅರಹಾನ ಮುನವಳ್ಳಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕುಮಿತೆ (ಫೈಟಿಂಗ್) ವಿಭಾಗದಲ್ಲಿ ಶ್ರೀಧರ್ ಹಡಪದ, ಅಭಿಷೇಕ ಯತನೂರ, ಭೂಮಿಕಾ ಗರಗ, ಅಕ್ಷತಾ ಅಂಗೋಳ್ಳಿ, ಅಲಫಾಜ ಮುನವಳ್ಳಿ ಉತ್ತಮ ಸ್ಥಾನ ಹಾಗೂ ಭಕ್ತಿ ದೊಡ್ಡಮನಿ, ಸಿದ್ದೇಶ್ವರ ಮಡಿವಾಳ, ಶಮೀನಾ ಹದಲಿ, ಪ್ರಿಥ್ವಿ ಬಾಲಣ್ಣವರ, ಪ್ರಗತಿ ಉಳಬುತ್ತೆ, ಅರಹಾನ ಮುನವಳ್ಳಿ, ಸುಜಯ ವಾಕರ, ಕೀರ್ತನ ಅಸಂಗಿ, ಸಂತೋಷ ತಳವಾರ, ಅಖಿಲ ಪಚರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕರಾಟೆ ಪಟುಗಳಿಗೆ ಶಿಹಾನ ಮಂಜುನಾಥ ಮಾದಾರ ತರಬೇತಿ ನೀಡಿದ್ದರು.