ಯಲ್ಲಾಪುರ: ಜೂನ್ 15 ರೊಳಗೆ ಜೆಜೆಎಮ್ ಕಾಮಗಾರಿ ಮುಗಿಸಲು ಸೂಚಿಸಿದ್ದೇವೆ ಒಂದು ವೇಳೆ ಕಾಮಗಾರಿ ಮುಗಿಯದೆ ಹೋದರೆ ಗುತ್ತಿಗೆದಾರ ಹಾಗೂ ಇಂಜಿನಿಯರ್ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ. ಎಮ್ ಹೇಳಿದರು.
ಅವರು ಪತ್ರಕರ್ತರೊಂದಿಗೆ ಮಾತನಾಡಿ, ತಾಲೂಕಿನಲ್ಲಿ 28 ಕಾಮಗಾರಿಗಳಲ್ಲಿ 24 ಕಾಮಗಾರಿ ಮುಕ್ತಾಯವಾಗಿ ಇನ್ನುಳಿದಂತೆ ನಾಲ್ಕು ಕಾಮಗಾರಿಗಳು ವಿವಿಧ ಹಂತಗಳಲ್ಲಿ ಇವೆ. ತಾಲೂಕಿನ ನ್ಯಾಸರ್ಗಿ, ಕಾಮಗಾರಿ ಬಾಕಿ ಇದೆ ಬಿಟ್ಟರೆ ಉಳಿದೆಲ್ಲ ಕಾಮಗಾರಿ ಜೂನ್ 15 ರೊಳಗೆ ಮುಗಿಸಲಾಗುವುದು. ತಾಲೂಕಿನ ಪ್ರಗತಿ ಪರಿಶೀಲನೆ ಹಾಗೂ ಜೆಜೆಎಮ್ ಕಾಮಗಾರಿ ಕಳೆದ ವರ್ಷ ತೆಗೆದುಕೊಂಡು ಕಾಮಗಾರಿ ಯಾವ ಹಂತದಲ್ಲಿ ಇದೆ ಎಂದು ಸ್ಥಳ ಪರಿಶೀಲನೆ ಮಾಡಲಾಗುವುದು. ಹಾಗೂ 21-22 ರಲ್ಲಿ 24 ಕಾಮಗಾರಿಗಳನ್ನು ಕಾರ್ಯಾದೇಶ ನೀಡಲಾಗಿದೆ.
ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಆರಂಭಿಸಿದ್ದೇವೆ. ಕಳೆದ ತಿಂಗಳಿಂದ ಕಾಮಗಾರಿಯಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಈ ತಿಂಗಳು ಕಾಮಗಾರಿ ಹೆಚ್ಚು ಮಾಡುವಂತೆ ಸೂಚಿಸಲಾಗಿದೆ. ಇಂದು ಶಾಲೆಗಳು ಆರಂಭ ಆಗಿರುವುದರಿಂದ ಚವಡಳ್ಳಿ ಶಾಲೆಗೆ ಭೇಟಿ ನೀಡಿ ಅಲ್ಲಿ ಅಮೃತ ಶಾಲೆಯಾಗಿ ಆಯ್ಕೆ ಆಗಿರುವುದರಿಂದ ಕೊಠಡಿಗಳ ರಿಪೇರಿಗಾಗಿ ಹಾಗೂ ಸ್ಕಾರ್ಟ್ ಕ್ಲಾಸ್ ನಿರ್ಮಾಣ ಮಾಡಲು ನಿರ್ಮಿತ ಕೇಂದ್ರದವರು ಮಾಡಿದ ಕಾಮಗಾರಿ ವೀಕ್ಷಿಸಿ ಅಮೃತ ಯೋಜನೆಯಡಿಯಲ್ಲಿ ಆಯ್ಕೆಯಾದ ಗ್ರಾಮ ಪಂಚಾಯತಕ್ಕೆ ಭೇಟಿ ನೀಡಿ ಅಲ್ಲಿ ಕಾಮಗಾರಿಗಳು ಯಾವ ಹಂತಗಳಲ್ಲಿ ಇದೆ ಎಂದು ವೀಕ್ಷಣೆ ಮಾಡುತ್ತೇನೆ ಎಂದರು. ಜಿಲ್ಲೆಯಲ್ಲಿ 300-400 ಹೊಸ ಕೊಠಡಿಗಳ ಬೇಡಿಕೆ ಇದೆ. ಅಷ್ಟೊಂದು ಅನುದಾನ ನಮ್ಮಲ್ಲಿ ಇಲ್ಲ ಆ ಪ್ರಸ್ತಾವನೆಯನ್ನು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಕಳುಹಿಸಲಾಗುವುದು ಅದರ ಪ್ರತಿಯನ್ನು ಉಸ್ತುವಾರಿ ಸಚಿವರಿಗೆ ಹಾಗೂ ಶಾಸಕರಿಗೆ ಕಳುಹಿಸಿ ಕೊಡಲಾಗುವುದು ವಿಶೇಷ ಅನುದಾನ ಬಂದರೆ ರಿಪೇರಿ ಹಾಗೂ ಹೊಸದಾಗಿ ಕಟ್ಟಡಗಳ ನಿರ್ಮಾಣ ಮಾಡಲಾಗುವುದು ಎಂದರು.