• Slide
    Slide
    Slide
    previous arrow
    next arrow
  • ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ ಆಯೋಜನೆ

    300x250 AD

    ಕಾರವಾರ: ತಂಬಾಕು ಪರಿಸರಕ್ಕೆ ಮಾರಕ ಎಂಬ ಧ್ಯೇಯ ವಾಕ್ಯದೊಂದಿಗೆ ಮೇ 31ರಂದು ವಿಶ್ವ ತಂಬಾಕು ರಹಿತ ದಿನ ಆಚರಿಸಲಾಗುತ್ತಿದ್ದು, ಈ ದಿನದ ಅಂಗವಾಗಿ ಜಿಲ್ಲೆಯಾದ್ಯಂತ ಸ್ಥಳೀಯರಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.

    ಸ್ಪರ್ಧೆಯು ತಂಬಾಕು ಪರಿಸರಕ್ಕೆ ಮಾರಕ ಎಂಬ ವಿಷಯದ ಕುರಿತಾಗಿದೆ. ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯವರಿಗೆ ಮಾತ್ರ ಅವಕಾಶವಿದ್ದು, ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಪ್ರಥಮ ಬಹುಮಾನ 1200, ದ್ವಿತೀಯ ಬಹುಮಾನ 1000 ಹಾಗೂ ತೃತೀಯ ಬಹುಮಾನ 800 ರೂಪಾಯಿಗಳನ್ನು ನೀಡಲಾಗುತ್ತದೆ.

    ಚಿತ್ರಕಲೆಯು ಕಡ್ಡಾಯವಾಗಿ ಕೈಬರಹದಿಂದಲೆ ಬಿಡಿಸಿರಬೇಕು, ಎ3 ಅಳತೆಯಲ್ಲಿರಬೇಕು ಹಾಗೂ ಚಿತ್ರಕಲೆಯ ಜೊತೆ ತಮ್ಮ ಹೆಸರು, ವಿಳಾಸ, ವಯಸ್ಸು, ದೂರವಾಣಿ ಸಂಖ್ಯೆ ಇತರೆ ಮಾಹಿತಿಯನ್ನು ನಮೂದಿಸಿ ಮೇ 27 ಮಧ್ಯಾಹ್ನ 1 ಗಂಟೆಯೊಳಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಕಾರ್ಯಕ್ರಮಾಧಿಕಾರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಗಳ ಕಚೇರಿ ಆವರಣಕ್ಕೆ ಪೋಸ್ಟ್ ಮುಖಾಂತರ ಅಥವಾ ಕಚೇರಿ ಇ- ಮೇಲ್ ವಿಳಾಸ ntcpkarwar@gmail.com ಕ್ಕೆ ಕಳುಹಿಸಬೇಕು.

    300x250 AD

    ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ  90080 90407, 94821 30521, 93807 46093ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಪ್ರಕಟಣೆಯಲ್ಲಿ ತಿಳಿಸಿದೆ.


    Share This
    300x250 AD
    300x250 AD
    300x250 AD
    Leaderboard Ad
    Back to top