
ಶಿರಸಿ: ಮಾರಿಗದ್ದೆ- ಅಡಕಳ್ಳಿ ಪಂಪವೆಲ್ ಗಳಿಗೆ ಮಳೆಯಿಂದಾಗಿ ಹಾನಿಯುಂಟಾಗಿದ್ದು ಶಿರಸಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆ ವ್ಯತ್ಯಯವಾಗುತ್ತದೆ ಎಂದು ನಗರಸಭೆ ತಿಳಿಸಿದೆ.
ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಶಿರಸಿಗೆ ನೀರು ಸರಬರಾಜು ಮಾಡುತ್ತಿದ್ದ ಪ್ರಮುಖ ಕೇಂದ್ರಗಳಾದ ಮಾರಿಗದ್ದೆ ಅಡ್ಕಳ್ಳಿ ಪಂಪಹೌಸ್ ಹಾಗೂ ಜಾಕ್ ವೆಲ್ ಗಳು ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ಶಿರಸಿ ನಗರಕ್ಕೆ ಕುಡಿಯುವ ನೀರು ಪೂರೈಸಲು ನಾಲ್ಕು ದಿನಗಳ ವ್ಯತ್ಯಯವಾಗುತ್ತದೆ ಸಾರ್ವಜನಿಕರಿ ಸಹಕರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.