ಶಿರಸಿ: ಯಡಳ್ಳಿ ರಸ್ತೆಯಲ್ಲಿ ಅಂಗಡಿ ಸೇರಿದಂತೆ ಶಾಲೆ- ಕಾಲೇಜು, ಹಾಲಿನ ಡೈರಿ ಸೊಸೈಟಿ, ಅನೇಕಾರು ಸಂಘ- ಸಂಸ್ಥೆಗಳ ಕಚೇರಿಗಳಿವೆ. ಈ ಎಲ್ಲವುಗಳು ರಸ್ತೆ ಎದುರಿನಲ್ಲಿಯೇ ಇರುವುದರಿಂದ ಈ ರಸ್ತೆಯಲ್ಲಿ ಅಪಘಾತಗಳು ನಡೆಯುತ್ತಿರುತ್ತವೆ. ಅಪಘಾತ ತಡೆಯಲು ಯಡಳ್ಳಿ ರಸ್ತೆಯಲ್ಲಿ ವೇಗ ತಡೆಗಾಗಿ ಹಂಪ್ ಹಾಗೂ ಸೂಚನಾ ಫಲಕ ಅಳವಡಿಸಬೇಕೆಂದು ಯಡಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರವೀಶ್ ಹೆಗಡೆಯವರಿಗೆ ಮನವಿ ನೀಡಿದರು.
ತಾಲೂಕಿನ ಯಡಳ್ಳಿ ಮುಖ್ಯ ರಸ್ತೆಯ ಎಡ- ಬಲಗಳಲ್ಲಿ ಶಾಲಾ- ಕಾಲೇಜು, ಸಂಘ- ಸಂಸ್ಥೆಗಳು, ಅಂಗಡಿ- ಮಳಿಗೆಗಳಿರುವುದರಿಂದ ನಿತ್ಯ ನೂರಾರು ಜನರು ತಿರುಗುತ್ತಾರೆ. ಆದರೆ ಇಲ್ಲಿ ವೇಗತಡೆ ಹಾಗೂ ಸೂಚನಾ ಫಲಕ ಇಲ್ಲದಿರುವುದರಿಂದ ಅನಾಹುತಗಳು ಸಂಭವಿಸುತ್ತಿವೆ. ಹೀಗಾಗಿ ಇಲ್ಲಿ ಹಂಪ್ ಹಾಗೂ ಸೂಚನಾ ಫಲಕ ಅಲಕವಡಿಸಬೇಕೆಂದು ವಿದ್ಯಾರ್ಥಿಗಳು ಸೇರಿದಂತೆ ಯಡಳ್ಳಿಯ ವಿವಿಧ ಸಂಘಟನೆಗಳು ಮನವಿ ಮಾಡಿವೆ.
ಮನವಿ ನೀಡುವ ಸಂದರ್ಭದಲ್ಲಿ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮಸ್ಥರು ಸಂಘಟನೆಗಳ ಪರವಾಗಿ ಶಿವರಾಮ ಹೆಗಡೆ, ನಿರಂಜನ ಹೆಗಡೆ, ದತ್ತಾತ್ರೇಯ ಹೆಗಡೆ, ಭಾಸ್ಕರ ಹೆಗಡೆ, ಶ್ರೀಧರ ಹೆಗಡೆ ಮುಂತಾದವರು ಇದ್ದರು.