ಯಲ್ಲಾಪುರ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಕಂಡ್ರನಕೊಪ್ಪದಲ್ಲಿ ತನ್ನ ಮನೆಯಲ್ಲಿ ಗಾಂಜಾ ಮಾರುತ್ತಿದ್ದ ರಾಮು ಸಕ್ಕು ಲಾಂಬೋರೆ ಎಂಬವನನ್ನು ಬಂಧಿಸಲಾಗಿದೆ. ಈತನಿಂದ 1.2 ಕೆಜಿ ಗಾಂಜಾ ಹಾಗೂ 10,100 ರೂ ನಗದು ವಶಪಡಿಸಿಕೊಳ್ಳಲಾಗಿದೆ.
ತಾಟವಾಳ ಸಮೀಪದ ಕಾರಕುಂಡಿ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರುತ್ತಿದ್ದ ಜಾನಾಬಾಯಿ ಗಂಗಾರಾಮ ಜೋರೆ ಎಂಬವಳನ್ನು ಬಂಧಿಸಲಾಗಿದೆ. ಈಕೆಯಿಂದ 2.18 ಕೆಜಿ ಗಾಂಜಾ ಹಾಗೂ 4500 ರೂ ನಗದು ವಶಪಡಿಸಿಕೊಳ್ಳಲಾಗಿದೆ. ಸಿಪಿಐ ಸುರೇಶ ಯಳ್ಳೂರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.