ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಕಾರಕುಂಡಿಯಲ್ಲಿ ಸೋಮವಾರ ಹೊಸ ಶಾಲಾ ಕಟ್ಟಡ ಉದ್ಘಾಟನೆಯೊಂದಿಗೆ ಶಾಲಾ ಪ್ರಾರಂಭೋತ್ಸವ ಮಾಡಲಾಯಿತು.
ತಾ.ಪಂ ಇಒ ಜಗದೀಶ ಕಮ್ಮಾರ ಶಾಲಾ ಕೊಠಡಿಯನ್ನು ಉದ್ಘಾಟಿಸಿ, ಮಕ್ಕಳಿಗೆ ಸಿಹಿತಿಂಡಿ,ಪಠ್ಯ ಪುಸ್ತಕಗಳನ್ನು ವಿತರಿಸಿದರು.
ಬಿಇಒ ಎನ್.ಆರ್.ಹೆಗಡೆ,ಬಿ.ಆರ್.ಸಿ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ,ಶಿಕ್ಷಣ ಸಂಯೋಜಕ ಪ್ರಶಾಂತ ಜಿ.ಎನ್.ಎಸ್.ಡಿಎಂಸಿ ಅಧ್ಯಕ್ಷ ದಾಕ್ಲು ಬಿಚುಕಲೆ ಪ್ರಮುಖರಾದ ಕನ್ನಡ,ಈರು ಸಿಂಧೆ,ಶಿಕ್ಷಕ ಲಕ್ಷ್ಮಣ ನಾಯ್ಕ ಮುಂತಾದವರು ಇದ್ದರು.