
ಕಾರವಾರ: ಭಾರೀ ಮಳೆಯಿಂದಾಗಿ ರಾಜ್ಯ ಹೆದ್ದಾರಿ-63 ರಲ್ಲಿ ಅಂಕೋಲಾ-ಯಲ್ಲಾಪುರದ ನಡುವಿನ ಅರಬೈಲ್ ಘಟ್ಟ ಪ್ರದೇಶದಲ್ಲಿ ಭಾರೀ ಭೂಕುಸಿತ ಉಂಟಾಗಿ ಮಣ್ಣಿನಿಂದ ರಸ್ತೆ ಪೂರ್ತಿಯಾಗಿ ಮುಚ್ಚಿಹೋಗಿದ್ದು ತೆರವು ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಂಕೋಲಾ -ಬಾಳೆಗುಳಿಕ್ರಾಸ್ -ಯಲ್ಲಾಪುರ ಮಾರ್ಗದಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈಮುಹಿಲನ್ ಆದೇಶ ಹೊರಡಿಸಿದ್ದಾರೆ.
ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಬದಲೀ ಮಾರ್ಗ ವ್ಯವಸ್ಥೆಯನ್ನು ಸೂಚಿಸಲಾಗಿದ್ದು, ಅಂಕೋಲಾ ಬಾಳೆಗುಳಿಕ್ರಾಸ್ ನಿಂದ ಯಲ್ಲಾಪುರ ಮಾರ್ಗವಾಗಿ ಸಂಚರಿಸುವ ಎಲ್ಲಾ ವಾಹಗಳು ಇನ್ನು ಮುಂದಿನ ಆದೇಶದ ವರೆಗೆ ಅಂಕೋಲಾ- ಕುಮಟಾ- ಹೊನ್ನಾವರ- ಸಿದ್ದಾಪುರ-ಶಿರಸಿ ಮಾರ್ಗವಾಗಿ ಸಂಚರಿಸುವಂತೆ ಡಿಸಿ ಆದೇಶ ಹೊರಡಿಸಿದ್ದಾರೆ.