• Slide
  Slide
  Slide
  previous arrow
  next arrow
 • ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಸ್ಥರ ಭೇಟಿ ಮಾಡಿದ ಸುನಿಲ್ ನಾಯ್ಕ್

  300x250 AD

  ಭಟ್ಕಳ: ತಾಲೂಕಿನ ಶಿರಾಲಿಯಲ್ಲಿ ನಡೆದ ಪೊಲೀಸ್ ವಾಹನ ಅಪಘಾತದಲ್ಲಿ ಮೃತಪಟ್ಟ ವೆಂಕಟಾಪುರ ಹಿಂದೂ ಕಾಲೋನಿ ನಿವಾಸಿ ವಿಜಯಾ ರಘು ಹೊನ್ನಾವರಕರ ಇವರ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರನ್ನು ಭೇಟಿ ಮಾಡಿದ ಶಾಸಕ ಸುನಿಲ್ ನಾಯ್ಕ ಸಾಂತ್ವನ ಹೇಳಿದರು.

  ಶವ ಇಡಲಾದ ಇಲ್ಲಿನ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿ ಮೃತರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿ ಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು. ನಂತರ ಅಲ್ಲಿಂದಲೇ ಗೃಹ ಸಚಿವರನ್ನು ಫೋನ್‌ನಲ್ಲಿ ಸಂಪರ್ಕಿಸಿದ ಶಾಸಕರು, ಇಲಾಖೆಯ ವತಿಯಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.

  300x250 AD

  ಈ ಸಂದರ್ಭದಲ್ಲಿ ಸಿಪಿಐ ದಿವಾಕರ, ಎಸ್‌ಐ ಭರತ್, ಎಸ್‌ಐ ರತ್ನಾ ಕುರಿ, ಬಿಜೆಪಿ ಮುಖಂಡರಾದ ಮಹೇಶ ನಾಯ್ಕ, ಪ್ರಮೋದ ಜೋಶಿ, ಸಂತೋಷ ನಾಯ್ಕ, ಹಿಂದೂ ಕಾಲೋನಿಯ ಪ್ರಮುಖರಾದ ಕಿರಣ ಶಿರೂರು, ಮೋಹನ ಶಿರಾಲಿಕರ, ನರಸಿಂಹ ಶಿರಾಲಿಕರ, ಸೀತಾರಾಮ್ ಪಾಲೇಕರ್, ಮೃತರ ಪುತ್ರ ಗಿರಿಧರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top