ಕಾರವಾರ: ಜಿಲ್ಲೆಯಲ್ಲಿ ಮೇ.17ರಿಂದ ಮೇ.19ರ ವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ. ಮೇ.18 ರಂದು ರೆಡ್ ಅಲರ್ಟ್ ಘೋಷಣೆಯಾಗಿದ್ದು ಸಾರ್ವಜನಿಕರು ಹಾಗೂ ಪ್ರವಾಸಿಗರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ
ಯಾವುದೇ ಪ್ರಕೃತಿ ವಿಕೋಪ ಸಮಸ್ಯೆಗಳಿಗೆ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
24*7 ಕಂಟ್ರೋಲ್ ರೂಂ ನಂ -1077
ಲ್ಯಾಂಡ್ ಲೈನ್ ನಂ – 08382 229857
ವಾಟ್ಸಪ್ ನಂ- 9483511015