
ಶಿರಸಿ: ತಾಲೂಕಿನ ಗ್ರಾಮೀಣಭಾಗದಲ್ಲಿ ದಾಖಲೆ ಮಳೆಯಾಗಿದ್ದು ವಾನಳ್ಳಿ ಗ್ರಾ.ಪಂ.ವ್ಯಾಪ್ತಿಯ ಕಕ್ಕಳ್ಳಿಯ ಅಜ್ಜೀಮನೆ ಬಳಿ ಭೂ ಕುಸಿತ ಸಂಭವಿಸಿದೆ.
ಕಕ್ಕಳ್ಳಿ – ಮುಸ್ಕಿ ಸಂಪರ್ಕಿಸುವ ರಸ್ತೆ ಭೂಕುಸಿತದಿಂದಾಗಿ ಮುಚ್ಚಲ್ಪಟ್ಟಿದ್ದು ಮುಸ್ಕಿ ಗ್ರಾಮಕ್ಕೆ ಇರುವ ಏಕೈಕ ರಸ್ತೆ ಇಲ್ಲದಂತಾಗಿದೆ.
ಅಜ್ಜಿಮನೆ ಗಟ್ಟದಲ್ಲಿ ಧರೆ ಕುಸಿದು ರಸ್ತೆಯ ಮೇಲೆ ಮಣ್ಣುತುಂಬಿ ತುರ್ತು ಅವಶ್ಯಕತೆ ಗೂ ಮುಸ್ಕಿ ಗ್ರಾಮದ ಜನ ಪರದಾಡುವಂತಾಗಿದೆ.
ಈ ಹಿಂದೆಯೂ ಅನೇಕ ಬಾರಿ ಮುಸ್ಕಿಗೆ ಸರಿಯಾದ ಸಂಪರ್ಕ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ಅನೇಕಬಾರಿ ಪ್ರತಿಭಟಿಸಿ ವಿನಂತಿಸಿಕೊಂಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಲಕ್ಷವಹಿಸಿರಲಿಲ್ಲ.
ಈಗ ಭೂ ಕುಸಿತದಿಂದಾಗ ಮುಸ್ಕಿ ಗ್ರಾಮ ಸಂಪರ್ಕ ರಹಿತ ವಾಗಿದ್ದು ಕೂಡಲೇ ತೆರವು ಕಾರ್ಯ ಪ್ರಾರಂಭಿಸಿ ಜನತೆಗೆ ಅನುಕೂಲ ಮಾಡಕೊಡಬೇಕಿದೆ