ಶಿರಸಿ: ಪಕ್ಷದ ವರಿಷ್ಠರ ನಡವಳಿಕೆಯಿಂದ ಬೇಸತ್ತು ದಶಕಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿ ದುಡಿದಿದ್ದ ಪ್ರವೀಣ ಹೆಗಡೆ ಸದಸ್ಯತ್ವಕ್ಕೆ ಪ್ರಾಥಮಿಕ ರಾಜಿನಾಮೆ ನೀಡಿದ್ದಾರೆ.
ಪ್ರಸ್ತುತ ತಾಲೂಕಾ ಕಿಸಾನ್ ಸೆಲ್ ಅಧ್ಯಕ್ಷರಾಗಿದ್ದ ಪ್ರವೀಣ ಹೆಗಡೆ ತಮ್ಮ ಅಧ್ಯಕ್ಷ ಸ್ಥಾನಕ್ಕೂ ರಾಜಿನಾಮೆ ಸಲ್ಲಿಸಿದ್ದಾರೆ. ಜಡ್ಡಿಗದ್ದೆ ಗ್ರಾಪಂ ಸದಸ್ಯರಾಗಿ, ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆ ನಿರ್ವಹಿಸಿ, ಹುಲೇಕಲ್ ಜಿ ಪಂ.ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿದ್ದರು.