ಶಿರಸಿ; ಸಹ್ಯಾದ್ರಿಯ ಶೃಂಗ ಶಿರಸಿ ನಗರದಲ್ಲಿ 28ವರ್ಷಗಳಿಂದ ಶಿಕ್ಷಣ ಸೇವೆಯಿಂದ ಇಡೀ ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶಿರಸಿ ಲಯನ್ಸ ಶಾಲೆಗಳು ತನ್ನ ಕಾರ್ಯಚಟುವಟಿಕೆ ಹಾಗೂ ನಿರಂತರ ಸಾಧನೆಯ ಮೂಲಕ ಹೆಸರು ಮಾಡುತ್ತಿದೆ. 1994ರಲ್ಲಿ ಶಿರಸಿ ಲಯನ್ಸ ಕ್ಲಬ್ ಹಾಗೂ ಸಮಾನ ಮನಸ್ಕರ ನೇತ್ರತ್ವದಲ್ಲಿ ಡಾ. ಎ.ಎನ್.ಪಟವರ್ಧನ ದೂರದೃಷ್ಟಿಯ ಫಲವಾಗಿ ಶ್ರಿ ಆಯ್.ಎ.ಮುರುಡೇಶ್ವರ ನಾಯಕತ್ವದಲ್ಲಿ ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆರಂಭಗೊಂಡು, ಅದರ ಮೂಲಕ 27 ಮಕ್ಕಳು ಎರಡು ಶಿಕ್ಷಕರೊಂದಿಗೆ ಆರಂಭವಾದ ಶಿರಸಿ ಲಯನ್ಸ ಶಾಲೆಗಳು, ಇಂದು ಸಾವಿರಕ್ಕೂ ಹೆಚ್ಚು ಮಕ್ಕಳು 50ಕ್ಕೂ ಹೆಚ್ಚು ಶಿಕ್ಷಕರನ್ನು ಹೊಂದಿವೆ.
ಶಿರಸಿ ಲಯನ್ಸ್ ಕ್ಲಬ್ ಸರ್ವಸದಸ್ಯರು ಹಾಗೂ ಸಮಾಜದಲ್ಲಿ ಸದಾಶಯಕ್ಕೆ ಪ್ರೋತ್ಸಾಹ ನೀಡುವ ದಾನಿಗಳ ಸಹಕಾರ ಶಾಲಾ ಅಭಿವೃದ್ಧಿ ಚಟುವಟಿಕೆಗಳ ಬೆನ್ನೆಲುಬಾಗಿದೆ. ಸದಾ ಸೃಜನಶೀಲ ಆಲೋಚನೆಗಳ ಮೂಲಕ ನಿರಂತರ ಕ್ರಿಯಾಶೀಲವಾಗಿರುವ ಶಾಲೆ ಶಿಕ್ಷಣ ಕ್ರೇತ್ರದಲ್ಲಿ ಭರವಸೆಯ ಸೆಲೆಯನ್ನು ಮೂಡಿಸಿದೆ. ಶಿರಸಿ ಲಯನ್ಸ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಶಿರಸಿಯನ್ನು ಪ್ರತಿನಿಧಿಸಿ ಹೆಮ್ಮೆ ತಂದಿದ್ದಾರೆ. ಪಠ್ಯ ಹಾಗೂ ಪಠ್ಯೇತರ ವಿಭಾಗಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ತೋರುವುದರ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿದ್ದಾರೆ.
ಶಾಲೆಯ ಸಾಧನೆಯ ಮೈಲಿಗಲ್ಲುಗಳು:
⦁ ಈವರೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಮಟ್ಟದ 32 ರ್ಯಾಂಕ್‍ಗಳು ಶಿರಸಿ ಲಯನ್ಸ ಶಾಲಾ ವಿದ್ಯಾರ್ಥಿಗಳ ಪಾಲಾಗಿದೆ.2013ರಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ತದನಂತರದ ವರ್ಷಗಳಲ್ಲಿ ಪ್ರತೀವರ್ಷ ರ‍್ಯಾಂಕ್ ಪಡೆಯುತ್ತಿರುವ ಶಾಲೆ. ಕಳೆದ ಸಾಲಿನಲ್ಲಿ (2020-21)ರಾಜ್ಯಮಟ್ಟದ 7 ರ‍್ಯಾಂಕ್‌ಗಳು. ಪ್ರತೀ ವರ್ಷ ಎಸ್.ಎಸ್.ಎಲ್.ಸಿ ಗುಣಾತ್ಮಕ ಫಲಿತಾಂಶ ಆಧರಿಸಿ ನಡೆಯುವ ಶಾಲಾ ಮೌಲ್ಯಾಂಕನ ಗುಣಮಟ್ಟದಲ್ಲೂ “ಎ” ಶ್ರೇಣಿ ಪಡೆಯುವಿಕೆ.
⦁ ಸ್ಕೌಟ್ ಹಾಗೂ ಗೈಡ್ ವಿಭಾಗದಲ್ಲಿ ಈವರೆಗೆ 26 ವಿದ್ಯಾರ್ಥಿಗಳು ರಾಜ್ಯಪಾಲ ಪುರಸ್ಕಾರಗಳನ್ನು ಪಡೆದ ರಾಜ್ಯದ ಕ್ರಿಯಾಶೀಲ ಸ್ಕೌಟ್ ಹಾಗೂ ಗೈಡ್ ಶಾಲೆ.
⦁ 24 ವಿದ್ಯಾರ್ಥಿಗಳು ಈವರೆಗೆ ರಾಷ್ಟ್ರಮಟ್ಟದ ವಿವಿಧ ಕ್ರೀಡಾ ಸ್ಫರ್ಧೆಗಳಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಿ ಪದಕ ವಿಜೇತರಾಗಿದ್ದಾರೆ.
⦁ ಶಾಲೆಯ ವಿದ್ಯಾರ್ಥಿನಿ ಪ್ರೇರಣಾ ಶೇಟ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾಳೆ.
⦁ ವಿಜ್ಞಾನ ವಿಭಾಗದ ವಿವಿಧ ರಾಷ್ಟ್ರಮಟ್ಟದ ಸ್ಫರ್ಧೆಗಳಲ್ಲಿ ಶಾಲೆಯ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ.
⦁ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ವಿಭಾಗದ ಸ್ಫರ್ಧೆಗಳಲ್ಲಿ ರಾಜ್ಯಮಟ್ಟದ ವಿಜೇತರಾಗಿದ್ದು, ದಕ್ಷಿಣ ಭಾರತ ಮಟ್ಟ ಹಾಗೂ ರಾಷ್ಟ್ರಮಟ್ಟದ ಸ್ಫರ್ಧೆಗಳಲ್ಲಿ ವಿಜೇತರಾಗಿರುತ್ತಾರೆ.
⦁ ಶಾಲೆಯ ವಿದ್ಯಾರ್ಥಿಗಳು ಪ್ರತೀ ವರ್ಷ ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿ, ಕಲೋತ್ಸವ, ಯುವ ವಿಜ್ಞಾನಿ, ಇನಸ್ಪೈರ್, ಸಿ.ವಿ.ರಾಮನ್ ಕ್ವಿಜ್ ಹಾಗೂ ಇನ್ನಿತರ ಪ್ರತಿಷ್ಟಿತ ಸ್ಪರ್ಧೆಗಳಲ್ಲಿ (ಹಿಂದೂ ಕ್ವಿಜ್, ಪ್ರಜಾವಾಣಿ ರಸಪ್ರಶ್ನೆ, ವಿರ್ಸಾ ಅಂತರ್ ಶಾಲಾ ಸ್ಪರ್ಧೆ) ನಿರಂತರ ರಾಜ್ಯ ಹಾಗು ರಾಷ್ಟ್ರಮಟ್ಟದ ಸಾಧನೆ ತೋರುತ್ತಿದ್ದಾರೆ.
⦁ ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಿಂದ ವಿದ್ಯಾರ್ಜನೆ ಮಾಡಿದ್ದು ದೇಶ ವಿದೇಶಗಳಲ್ಲಿ ಪ್ರತಿಷ್ಟಿತ ಉದ್ಯೋಗ ಪಡೆದಿದ್ದಾರೆ. ಅಲ್ಲದೇ ಐ.ಐ.ಟಿ. ಸೇರಿದಂತೆ ಪ್ರತಿಷ್ಟಿತ ವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.
ಶಾಲೆಯ ವೈಶಿಷ್ಟ್ಯತೆಗಳು:
⦁ ಸಂಸ್ಕಾರಯುತ ಶಿಕ್ಷಣ, ಸಂಸ್ಕೃತಿಯ ಭದ್ರ ಬುನಾದಿಯ ಮೌಲ್ಯಯುತ ಶಿಕ್ಷಣ ಪ್ರಸಾರ
⦁ ಪೂರ್ವಪ್ರಾಥಮಿಕ ಹಂತದಿಂದಲೇ ಮಗುವಿನ ಅಭಿವ್ಯಕ್ತಿಗೆ ಪೋಷಣೆ ನೀಡುವ ಆಸಕ್ತಿದಾಯಕ ಚಟುವಟಿಕಾಯುಕ್ತ ಬೋಧನಾಕ್ರಮ.
⦁ ನಿರಂತರವಾಗಿ ಪಠ್ಯ ಹಾಗೂ ಪಠ್ಯೇತರ ಸಾಧನೆಗೆ ವಿವಿಧ ಸಂಘಗಳ ಮೂಲಕ ಸದಾ ಕಾರ್ಯಕ್ರಮಗಳ ಆಯೋಜನೆ.
⦁ ಎಲ್ಲಾ ತರಗತಿಗಳಲ್ಲಿ ಸಂಸ್ಕೃತ, ಭಗವದ್ಗೀತಾ ಪಠಣ, ಯೋಗ, ಧ್ಯಾನದ ವಿಶೇಷ ತರಗತಿಗಳು.
⦁ ಲಯನ್ಸ್ ಕ್ವೆಸ್ಟ್, ಲಿಯೋಕ್ಲಬ್, ಸ್ಕೌಟ್ & ಗೈಡ್ ಮೂಲಕ ಮಕ್ಕಳಲ್ಲಿ ನಿರಂತರ ಸೇವೆ, ಸಹಕಾರ, ನಾಯಕತ್ವ ಬೆಳವಣಿಗೆಗೆ ಪೂರಕ ಅವಕಾಶಗಳು.
⦁ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿರುವ ವಿಶಾಲ ಗ್ರಂಥಾಲಯ.
⦁ ವೈಜ್ಞಾನಿಕ ಚಿಂತನೆಯ ಅಗತ್ಯ ಪೂರೈಸುವ ಶಾಲಾ ಪ್ರಯೋಗಾಲಯ.
⦁ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಸಿದ್ದಗೊಂಡ, ಆರೋಗ್ಯಕರವಾಗಿ ನಿರ್ವಹಿಸಲ್ಪಡುತ್ತಿರುವ, ಸ್ವಚ್ಛ ಆಧುನಿಕ ಶೌಚಾಲಯಗಳು.
⦁ ಸುಸಜ್ಜಿತ ವಿಶಾಲ ತರಗತಿ ಕೋಣೆಗಳು. ಆಧುನಿಕ ಡಿಜಿಟಲ್ ಮಾಧ್ಯಮಗಳನ್ನು ತರಗತಿಯ ಸಂವಹನಕ್ಕೆ ಪೂರಕವಾಗಿ ಬಳಸುವ ಸ್ಮಾರ್ಟಕ್ಲಾಸ್ ತರಗತಿಗಳು. ಕಂಪ್ಯೂಟರೀಕೃತ ಬೋಧನೆ.
⦁ ಪೂರ್ವ ಪ್ರಾಥಮಿಕ ವಿಭಾಗಕ್ಕೆ ಪ್ರತ್ಯೇಕ ಉಪಕರಣಗಳನ್ನೋಳಗೊಂಡ ಆಟದ ಮೈದಾನ.( ಕಿಡ್ಸ್ ಪಾರ್ಕ)
⦁ ಮಗುವಿಗೆ ವಿವಿಧ ಕೌಶಲಗಳ ಕಲಿಕೆಗೆ ಪುರಕವಾಗಿ ಶಾಲಾ ಆವರಣದಲ್ಲಿ ನಿರಂತರ ಸಂಗೀತ, ಚೆಸ್, ಅಬ್ಯಾಕಸ್ ಕಲಿಕೆಗೆ ಅವಕಾಶ.
⦁ ಎಂಟನೇ ತರಗತಿಯಿಂದಲೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ( ಎನ್.ಟಿ.ಎಸ್.ಈ ಹಾಗೂ ಒಲಂಪಿಯಾಡ್) ಪೂರಕ ಬುನಾದಿ ತರಗತಿಗಳು ಹಾಗೂ ತರಬೇತಿ.
⦁ ಶಾಲಾ ಯೂಟ್ಯೂಬ್ ಚಾನೆಲ್ ಮೂಲಕ ವಾರಾಂತ್ಯದ “ ಲೋಚನ-ಬಿಯಾಂಡ್ ಅಕೆಡೆಮಿಕ್” ಶೀರ್ಷಿಕೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರ ಅನುಭವ ಗಾಥೆಯ ಪ್ರಸಾರ.
ಈ ಕಾರ್ಯಕ್ರಮವು ಶಿರಸಿ ಲಯನ್ಸ ಶಾಲೆಯ ಅತ್ಯಂತ ವಿಶಿಷ್ಟ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ಕೋವಿಡ್ ಕಾಲದಲ್ಲಿ ಬಾಲಕ- ಪಾಲಕ- ಶಿಕ್ಷಕರ ಪುನಃಶ್ಚೇತನಕ್ಕೆ ಸಹಕಾರಿಯಾಯಿತು. ಶಿರಸಿ ಲಯನ್ಸ ಶಾಲೆಯ ಮೂಲಕ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ದೇಶ ವಿದೇಶಗಳಲ್ಲಿನ ಲಕ್ಷ ಸಂಖ್ಯೆಯ ವೀಕ್ಷಕರ ಗಮನ ಸೆಳೆದಿದೆ. ಸಾವಿರಾರು ಸಂಖ್ಯೆಯ ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದಿದ್ದಾರೆ.
⦁ ನಾಡಿನ ಶ್ರೇಷ್ಟ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ನೇತ್ರತ್ವದ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಸಂಸ್ಥೆಯ ಮೂಲಕ ಶಾಲಾ ಶಿಕ್ಷಕರಿಗೆ ನಿರಂತರ ಪುನಃಶ್ಚೇತನ ತರಬೇತಿ.
⦁ ಶಾಲಾ ಮುಖ್ಯಾಧ್ಯಾಪಕರಾದ ಶಶಾಂಕ ಹೆಗಡೆ ಇವರ ಕ್ರಿಯಾಶೀಲ ಹಾಗೂ ಸೃಜನಶೀಲ ಮನೋಭಾವದಿಂದ, ಅಂತರಾಷ್ಟ್ರೀಯ ಮಟ್ಟದಲ್ಲಿ ಆನ್ ಲೈನ್ ವೇದಿಕೆಯಲ್ಲಿ ಶಾಲೆಯನ್ನು ಸಮರ್ಥವಾಗಿ ಪ್ರತಿನಿಧಿಸಿದ ಪರಿಣಾಮ “ಗೂಗಲ್-ಬೈಜುಸ್” ಸಹಯೋಗದ ವಿದ್ಯಾರ್ಥಿ ಯೋಜನೆಗೆ ಆಯ್ಕೆಯಾಗಿದ್ದು, ಉಚಿತ ಆನ್ ಲೈನ್ ಶಿಕ್ಷಣ ಯೊಜನೆಯ ರಾಜ್ಯದ ಏಕೈಕ ಫಲಾನುಭವಿ ಶಾಲೆಯಾಗಿದೆ.
⦁ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ವ್ಯವಸ್ಥೆ.
⦁ ಇಡೀ ಶಾಲಾ ಆವರಣ ಸುರಕ್ಷತೆಯ ದೃಷ್ಟಿಯಿಂದ ಸಿ.ಸಿ.ಟಿ.ವಿ ಹಾಗೂ ಭದ್ರತಾ ಸಿಬ್ಬಂದಿಗಳ ನಿಗಾದಲ್ಲಿ ಎಲ್ಲಾ ಸಮಯದಲ್ಲೂ ಇರುತ್ತದೆ.
⦁ ಸತತ 28 ವರ್ಷಗಳವರೆಗೂ ಕೂಡಾ ತಮ್ಮ ತಾಳ್ಮೆ, ಬದ್ಧತೆ, ತ್ಯಾಗ ಹಾಗೂ ಪರಿಶ್ರಮದ ಮೂಲಕ ಶಾಲೆಯನ್ನು ಮುನ್ನಡೆಸುತ್ತಿರುವ ಸಮರ್ಥ ಅನುಭವೀ ಶಿಕ್ಷಕ ವೃಂದ ಶಾಲೆಯ ಬಹುದೊಡ್ಡ ಆಸ್ತಿ.
⦁ ಶಿರಸಿ ನಗರದ ಹೃದಯ ಭಾಗದಲ್ಲಿ ವಿಶಾಲವಾಗಿ, ವ್ಯವಸ್ಥಿತವಾಗಿ ರೂಪುಗೊಂಡ ಶಾಲಾ ಆವರಣ.
⦁ ಅಗತ್ಯ ವಿದ್ಯಾರ್ಥಿಗಳಿಗೆ, ಪಾಲಕರಿಗೆ ವೈಯುಕ್ತಿಕ ಸಲಹೆ ಹಾಗೂ ಮಾರ್ಗದರ್ಶನ ಸೇವೆ, ನಿರಂತರ ಶೈಕ್ಷಣಿಕ ಹಾಗೂ ಮಾರ್ಗದರ್ಶನ ಸೇವೆ ನೀಡುವದರ ಮೂಲಕ ಶಾಲೆ ಪ್ರತೀ ವಿದ್ಯಾರ್ಥಿಯ ವೈಯುಕ್ತಿಕ ಕಾಳಜಿಗೆ ಹೆಚ್ಚಿನ ಗಮನ ನೀಡುತ್ತಿದೆ.
⦁ ಲಯನ್ಸ್ ಅನ್ನಪೂರ್ಣ ಯೋಜನೆಯಿಂದ ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಮದ್ಯಾಹ್ನ ಬಿಸಿಊಟ.
⦁ ಶುದ್ದ ಕುಡಿಯುವ ನೀರಿನ ಘಟಕದ ಮೂಲಕ ನಿರಂತರ ಶುದ್ಧ ನೀರಿನ ಪೂರೈಕೆ.
⦁ ಪರಿಶ್ರಮವೇ ಜೀವನ-ಶಿಕ್ಷಣವೇ ಶಕ್ತಿ ಶಿಕ್ಷಣ ಸಂಸ್ಥೆಯ ಧ್ಯೇಯ ವಾಕ್ಯ…