ಬೈಂದೂರು: ಯಕ್ಷಗಾನ ನಾಟ್ಯ ವಿನಾಯಕ ದೇವರ ಪ್ರತಿಷ್ಠಾಪಕ, ಪ್ರಸಿದ್ದ ಯಕ್ಷಗಾನ ಕಲಾವಿದ ಸಿದ್ದಾಪುರ ತಾಲೂಕಿನ ಕಲಗದ್ದೆಯ ವಿನಾಯಕ ಹೆಗಡೆ ಅವರಿಗೆ ಬೈಂದೂರು ತಾಲೂಕು ಅರೆಹೊಳೆಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ ತಂಡ ನೀಡುವ ಪ್ರಥಮ ಗಣಪಯ್ಯ ಸ್ಮಾರಕ ಪ್ರಶಸ್ತಿಯನ್ನು ರವಿವಾರ ಪ್ರದಾನ ಮಾಡಲಾಯಿತು.
ಈ ವೇಳೆ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ, ಅರೆಹೊಳೆ ಸದಾಶಿವರಾವ್, ಗೀತಾ ರಾವ್, ಮಹೇಂದ್ರ ಪೂಜಾರಿ, ಶಾಮಲಾ ಕುಂಜಾರ್, ಸರಸ್ವತಿ ಗಣಪಯ್ಯ ಇತರರು ಇದ್ದರು.