ಶಿರಸಿ: ತಾಲೂಕಿನ ಇಸಳೂರಿನ ಗ್ರಾಮದ ಕೃಷಿ ಕಾರ್ಮಿಕ ಚಂದ್ರು ಚನ್ನಯ್ಯ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿದ್ದ ಚಿನ್ನದ ಆಭರಣ, ನಗದು ಸೇರಿ ಎರಡು ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಕಳ್ಳತನ ನಡೆದಿದೆ.
ಮನೆಯಲ್ಲಿ ಯಾರು ಇಲ್ಲದಿದ್ದಾಗ ಈ ಕಳ್ಳತನ ನಡೆದಿದ್ದು, ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮೀಣ ಪಿಎಸ್ಐ ಪರೀಶೀಲನೆ ನಡೆಸಿದ್ದು ಬಡ ಕೂಲಿ ಮನೆಯಲ್ಲಿ ಉಳಿಸಿಟ್ಟಿದ್ದ ಅಷ್ಟಿಷ್ಟು ಹಣ, ಒಡವೆ ಕಳ್ಳರ ಪಾಲಾಗಿದೆ.