
ಶಿರಸಿ: ಸೋಂದಾ ಸ್ವರ್ಣವಲ್ಲೀಯಲ್ಲಿಯಲ್ಲಿ ಜು.24ರಿಂದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಪವಿತ್ರ ಚಾತುರ್ಮಾಸ್ಯ ವೃತ ಸಂಕಲ್ಪ ಕೈಗೊಳ್ಳಲಿದ್ದಾರೆ.
ಮುಂಜಾನೆ ವ್ಯಾಸ ಪೂಜೆ ನೆರವೇರಿಸಿ ವೃತ ಸಂಕಲ್ಪ ಮಾಡಲಿದ್ದು, ಮಧ್ಯಾಹ್ನ 3.30ಕ್ಕೆ ಧರ್ಮಸಭೆ ನಡೆಸಲಿದ್ದಾರೆ. ವಿಶ್ವೇಶ್ವರ ಭಟ್ಟ ಕೆರೇಕೈ ಹಾಗೂ ಆರ್.ಎಸ್.ಹೆಗಡೆ ಭೈರುಂಬೆ ಅವರನ್ನು ಶ್ರೀಗಳು ಸಮ್ಮಾನಿಸಲಿದ್ದಾರೆ. ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ, ನಿರ್ದೇಶಕ ಎಸ್.ಎಂ.ಹೆಗಡೆ ಬಣಗಿ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಮುಂಡಿಗೇಸರದ ದೇವಸ್ಥಾನದಲ್ಲಿ ಕಳೆದ ಡಿಸೆಂಬರ್‍ನಲ್ಲಿ ಯಕ್ಷ ಶಾಲ್ಮಲಾ, ವಿಶ್ವಶಾಂತಿ ಸೇವಾ ಟ್ರಸ್ಟ, ಶಬರ ಹಾಗೂ ಮುಂಡಿಗೇಸರ ದೇವಸ್ಥಾನದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ವಿ.ಉಮಾಕಾಂತ ಭಟ್ಟ ಕೆರೇಕೈ ಅವರ ಶ್ರೀರಾಮ ಪಾತ್ರದ ಏಳು ದಿನಗಳ ಸರಣಿ ತಾಳಮದ್ದಲೆ ಶ್ರೀರಾಮಾನುಭವದ ಸಿಡಿ ಬಿಡುಗಡೆ ಕೂಡ ನಡೆಯಲಿದೆ ಎಂದು ಮಠದ ಪ್ರಕಟನೆ ತಿಳಿಸಿದೆ.