ಗೋಕರ್ಣ; ಪ್ರವಾಸಕ್ಕೆಂದು ಬಂದಿದ್ದ ಯುವಕನೊಬ್ಬ ಕರಿಯಪ್ಪನ ಕಟ್ಟೆಯ ಬಳಿ ಸಮುದ್ರದಲ್ಲಿ ಈಜುವಾಗ ಸುಳಿಗೆ ಸಿಕ್ಕು ಮೃತಪಟ್ಟ ಘಟನೆ ನಡೆದಿದೆ.
ಖಾಸಗಿ ರೆಸಾರ್ಟ್ ನಲ್ಲಿ ಉಳಿದಿದ್ದ ಛತ್ತೀಸಗಡದ ಮೂಲದ ರಾಹುಲ್ ಪಾಂಡೆ (೨೩) ಗೆಳೆಯರ ಜೊತೆ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದ ಸಮಯದಲ್ಲಿ ಸಮುದ್ರದಲ್ಲಿ ಈಜುವಾಗ ನೀರಿನ ಸುಳಿಗೆ ಸಿಕ್ಕು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಕೊಂಡಿದ್ದಾರೆ.