
ಶಿರಸಿ: ತಾಲೂಕಿನ ಯಡಹಳ್ಳಿಯ ವಿದ್ಯೋದಯ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದೀಪ್ತಿ ದಿನೇಶ ಹೆಗಡೆ 600ಕ್ಕೆ 593 ಅಂಕ ಪಡೆದು ರಾಜ್ಯಕ್ಕೆ ಎಂಟನೇ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾಳೆ ಎಂದು ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶ್ರೀಧರ ಹೆಗಡೆ ಮಶೀಗದ್ದೆ ಹರ್ಷ ವ್ಯಕ್ತಪಡಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 564 ಅಂಕ ಪಡೆದ ಶಾಂತಿ ಪೂಜಾರಿ ದ್ವಿತೀಯ, 555 ಅಂಕ ಪಡೆದ ಅನುಷಾ ಪಿ.ಗೌಡ ತೃತೀಯ ಸ್ಥಾನ ಪಡೆದಿದ್ದು, 10 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗಿದ್ದಾರೆ. ಶೇ.100 ಫಲಿತಾಂಶ ಕಾಲೇಜಿನದ್ದಾಗಿದೆ.
ಕಲಾ ವಿಭಾಗದಲ್ಲಿ ರೋಹಿಣಿ ಕೆ.ಶೇಟ್ 506 ಅಂಕ ಪಡೆದು ಪ್ರಥಮ, 432 ಅಂಕ ಪಡೆದು ನಾಗರತ್ನ ಬೋವಿ ಒಡ್ಡರ್ ದ್ವಿತೀಯ, 412 ಅಂಕ ಪಡೆದ ಸೌಮ್ಯಾ ಆರ್.ನಾಯ್ಕ ತೃತೀಯ ಸ್ಥಾನ ಪಡೆದಿದ್ದಾರೆ. ಶೇ.100 ಫಲಿತಾಂಶ ಕಲಾ ವಿಭಾಗದಲ್ಲೂ ಆಗಿದೆ. ವಿದ್ಯಾರ್ಥಿಗಳ ಸಾಧನೆಗೆ ಕಾರಣರಾದ ಪ್ರಾಚಾರ್ಯ ಡಾ. ಆರ್.ಟಿ.ಭಟ್ಟ ಹಾಗೂ ಉಪನ್ಯಾಸಕ ವೃಂದವನ್ನೂ ಅಭಿನಂದಿಸಿದ್ದಾಗಿ ಪ್ರಕಟನೆಯಲ್ಲಿ ಸಮಿತಿಯ ಕಾರ್ಯದರ್ಶಿ ಎಂ.ವಿ.ಹೆಗಡೆ ಕಾನಗೋಡ ತಿಳಿಸಿದ್ದಾರೆ.