ಮುಂಡಗೋಡ; ಬೇಸಿಗೆ ರಜೆ ಮುಗಿಸಿ ಸಂಭ್ರಮದಿಂದ ಪುನಃ ಶಾಲೆಗೆ ಹೋಗಬೇಕಾಗಿದ್ದ ಪುಟ್ಟ ವಿದ್ಯಾರ್ಥಿನಿ ಶಾಲೆಯ ಪ್ರಾರಂಭೋತ್ಸವದ ದಿನವೇ ಅಸುನೀಗಿದ ಘಟನೆ ತಾಲೂಕಿನ ಚಿಗಳ್ಳಿಯಲ್ಲಿ ನಡೆದಿದೆ.
ಆಂಗ್ಲ ಮಾಧ್ಯಮದ ಮೂರನೇ ತರಗತಿಯ ವಿದ್ಯಾರ್ಥಿನಿ ಸನ್ನಿಧಿ ಸೋಮವಾರ ಮಧ್ಯಾಹ್ನ ಸಾವನ್ನಪ್ಪಿದ್ದಾಳೆ.
ಸೋಮವಾರ ಬೆಳಿಗ್ಗೆಯಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಈಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ವೈದ್ಯರ ಸೂಚನೆಯಂತೆ ತುರ್ತು ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಒಯ್ದಿದ್ದು, ದುರದೃಷ್ಟವಶಾತ್ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ.