ಶಿರಸಿ:ಶಬರ ಸಂಸ್ಥೆ ಸೋಂದಾ ಇವರು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಶ್ರೀ ಲಕ್ಷ್ಮೀ ವೇಂಕಟೇಶ ದೇವಸ್ಥಾನ ಶಿಂಗನಳ್ಳಿ ಮತ್ತು ಊರವರ ಸಹಕಾರದಿಂದ ನಡೆಸುತ್ತಿರುವ ಯಕ್ಷೋತ್ಸವವನ್ನು ಯಕ್ಷಗಾನ ಪೋಷಕ ಆರ್ ಜಿ ಭಟ್ಟ್ ವರ್ಗಾಸುರ ಚಂಡೆ ನುಡಿಸುವದರ ಮೂಲಕ ಉದ್ಘಾಟಿಸಿದರು.
ಮುಖ್ಯ ಆಮಂತ್ರಿತರಾದ ವಿ.ಎಸ್.ಹೆಗಡೆ ಹಲ್ಲುಸರಿಗೆಯವರು ಮಾತನಾಡಿ ಶಿಂಗನಳ್ಳಿಯ ಯಕ್ಷಗಾನ ಪ್ರಿಯ ಶ್ರೀದೇವರಲ್ಲಿ ಯಕ್ಷಗಾನದ ಹರಕೆ ಹೇಳಿಕೊಂಡರೆ ಇಷ್ಟಾರ್ಥ ನೆರವೇರಿಸುತ್ತಾನೆ. ದೇವಸ್ಥಾನದಲ್ಲಿ ಹೆಚ್ಚಿನ ಹರಕೆಯಾಟಗಳು ನಡೆಯಲಿ ಎಂದರು.
ಸಭೆಯ ಅಧ್ಯಕ್ಷತೆವಹಿಸಿದ ಜಿ ಟಿ ಹೆಗಡೆ ತಟ್ಟೀಸರ ಯಕ್ಷಗಾನ ಕಲಾ ಪ್ರದರ್ಶನದಿಂದ ಸಮಾಜದ ಭೌತಿಕ ಮಟ್ಟ ಹೆಚ್ಚಾಗುತ್ತದೆ. ಈ ತರಹದ ಪ್ರದರ್ಶನ ಪ್ರತಿಯೊಂದು ದೇವಸ್ಥಾನದ ಆವರಣದಲ್ಲಿ ನಡೆಯುವಂತಾಗಬೇಕು ಎಂದರು. ದೇವಸ್ಥಾನದ ಆಡಳಿತ ಕಮಿಟಿಯ ಅಧ್ಯಕ್ಷ ಸುಬ್ರಾಯ ಹೆಗಡೆ ಹೆಗಡೆಮನೆ ಉಪಸ್ಥಿತರಿದ್ದರು.
ನಾಗರಾಜ್ ಜೋಶಿ ಸೋಂದಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ ಹೆಗಡೆ ಹುಳ್ಸೆಮಕ್ಕಿ ವಂದಿಸಿದರು. ನಂತರ ನಡೆದ ಮಾರುತಿ ಪ್ರತಾಪ ಯಕ್ಷಗಾನದಲ್ಲಿ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ನರಸಿಂಹ ಭಟ್ಟ ಹಂಡ್ರಮನೆ, ವಿಘ್ನೇಶ್ವರ ಗೌಡ ಕೆಸರಕೊಪ್ಪ,ಮುಮ್ಮೇಳದಲ್ಲಿ ಸಂಜಯ ಬೆಳೆಯೂರು, ಅಶೋಕ ಭಟ್ಟ ಸಿದ್ದಾಪುರ,ಶ್ರೀಧರ ಹೆಗಡೆ ಚಪ್ಪರಮನೆ,ಸದಾಶಿವ ಮಲವಳ್ಳಿ,ನರೇಂದ್ರ ಅತ್ತೀಮುರುಡು, ಪ್ರವೀಣ ಹೆಗಡೆ ತಟ್ಟೀಸರ,ಅವಿನಾಶ ಕೊಪ್ಪ ಪ್ರೇಕ್ಷಕರನ್ನು ರಂಜಿಸಿದರು.