ಭಟ್ಕಳ: ಪಟ್ಟಣದ ಬಂದರ ರಸ್ತೆಯ ಟಿಎಪಿಎಂಸಿ ಶಾಖೆಯ ಪಕ್ಕದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾದ ಕೆನರಾ ಡಿಸಿಸಿ ಬ್ಯಾಂಕ್ ಶಾಖೆಯ ಸ್ವಂತ ಕಟ್ಟಡವನ್ನು ಕರ್ನಾಟಕ ರಾಜ್ಯ ಕಾರ್ಮಿಕ ಸಚಿವ ಹಾಗೂ ಕೆನರಾ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ ಉದ್ಘಾಟಿಸಿದರು.
ನೂತನ ಕಟ್ಟಡವನ್ನು ಸಂಪೂರ್ಣವಾಗಿ ವೀಕ್ಷಿಸಿ ಮಾತನಾಡಿದ ಅವರು ಭಟ್ಕಳದಲ್ಲಿ ಬ್ಯಾಂಕ್ ಶಾಖೆಯನ್ನು ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇದರ ಸದುಪಯೋಗವನ್ನು ಸ್ಥಳೀಯ ಗ್ರಾಹಕರು ಪಡೆದುಕೊಂಡು ಮತ್ತಷ್ಟು ಉತ್ತಮ ರೀತಿಯ ವ್ಯವಹಾರ ನಡೆಸಬೇಕೆಂದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನಿಂದ ಸಚಿವ ಶಿವರಾಮ ಹೆಬ್ಬಾರ, ಕೆಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಮೋಹನದಾಸ ನಾಯಕ, ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಹಾಗೂ ಮಾಜಿ ಶಾಸಕ ಮಂಕಾಳ ವೈದ್ಯ, ಶಾಸಕ ಸುನೀಲ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬ್ಯಾಂಕಿನ ಅಂಕೋಲಾ ತಾಲೂಕಿನ ನಿರ್ದೇಶಕ ಬೀರಣ್ಣ ನಾಯಕ, ಕೆಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ. ಭಾಗವತ್, ಭಟ್ಕಳ ಶಾಖೆಯ ವ್ಯವಸ್ಥಾಪಕ ಎಂ. ಎ. ಶೇಖ್, ಮೇಲ್ವಿಚಾರಣಾಧಿಕಾರಿ ಲೋಕೇಶ ಶಿರೂರು, ಬ್ಯಾಂಕಿನ ಭಟ್ಕಳ, ಶಿರಾಲಿ, ಮುರ್ಡೇಶ್ವರ ಶಾಖೆಯ ಸಿಬ್ಬಂದು ತಾಲೂಕಿನ ವಿವಿಧ ಸೊಸೈಟಿ, ಸಹಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.