
ಶಿರಸಿ: ತಾಲೂಕಿನ ಹುಸರಿ-ಕೊರ್ಲಕಟ್ಟಾ ರಸ್ತೆಯಲ್ಲಿ ಚೆನ್ನಾಪುರ ಕೆರೆಯ ನೀರು ರಸ್ತೆಗೆ ನುಗ್ಗಿದ ಪರಿಣಾಮ, ಬೈಕ್ ಸವಾರನೊಬ್ಬ ರಸ್ತೆ ದಾಟಲು ಹೋಗಿ ಸಾವನ್ನಪ್ಪಿದ ದುರ್ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಹುಸರಿಯ ಗಂಗಾಧರ ಗೌಡ ಮೃತ ದುರ್ದೈವಿಯಾಗಿದ್ದು, ಕಳೆದ ತಿಂಗಳಷ್ಟೇ ಮದುವೆ ನಡೆದಿತ್ತು ಎಂಬ ಮಾಹಿತಿ ಲಭಿಸಿದೆ. ಶುಕ್ರವಾರ ಬೆಳಿಗ್ಗೆ ಮೃತನ ಶವ ಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ದುಃಖ ಆವರಿಸಿದೆ.