ಶಿರಸಿ: ತಾಲೂಕಿನ ಹುಲೇಕಲ್ ಹತ್ತಿರದ ಹಾರೆಹುಲೇಕಲ್‍ನಲ್ಲಿ ಸ್ಥಳೀಯ ನಾಗರಿಕರು ಹಾಗೂ ಶಾಸ್ತ್ರೀಯ ಸಂಗೀತಾಭಿಮಾನಿ ಶ್ರೀಮತಿ ಸುಧಾ ದಿವಾಕರ ಗೌಡರ್ ಸಂಘಟಿಸಿದ್ದ ಸಂಗೀತ ಕಾರ್ಯಕ್ರಮವು ಕಿಕ್ಕಿರಿದು ಸೇರಿದ್ದ ಸಂಗೀತಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಪದ್ಮಶ್ರೀ ಡಾ. ಪಂಡಿತ್ ವೆಂಕಟೇಶಕುಮಾರ್ ಧಾರವಾಡ ಅವರು ಸರಿಸುಮಾರು ಮೂರೂವರೆ ತಾಸುಗಳಿಗೂ ಮಿಕ್ಕಿ ಸಂಗೀತ ಕಚೇರಿ ನಡೆಸಿಕೊಟ್ಟರು. ಪಂಡಿತರವರ ಗಾಯನಕ್ಕೆ ಹಾರ್ಮೋನಿಯಂನಲ್ಲಿ ವಿ.ಪ್ರಕಾಶ ಹೆಗಡೆ ಯಡಳ್ಳಿ, ತಬಲಾದಲ್ಲಿ ಶ್ರೀಧರ ಮಾಂಡ್ರೆ ಹುಬ್ಬಳ್ಳಿ ಸಾಥ್ ನೀಡಿದರು.
ಹಿನ್ನೆಲೆಯ ಸಹಗಾನ ಮತ್ತು ತಂಬೂರಾದಲ್ಲಿ ರಾಘವ ಹೆಗಡೆ ಕೂರ್ಸೆ ಹಾಗೂ ಮನು ಹೆಗಡೆ ಪುಟ್ಟನಮನೆ ಸಹಕರಿಸಿದರೆ ತಾಳದಲ್ಲಿ ಅನಂತಮೂರ್ತಿ ಪಾಲ್ಗೊಂಡರು.
ಆರಂಭದಲ್ಲಿ ಎಚ್.ಎಸ್. ಜೀವನಸಾಗರ ಪ್ರಾಸ್ತಾವಿಕ ಮಾತನಾಡಿದರೆ, ಸುಧಾ ದಿವಾಕರ ಗೌಡರ್ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ಕಲಾವಿದರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರೆ ವಿಭಾ ಗೌಡರ್ ವಂದಿಸಿದರು.
ಇದೇ ಸಂದರ್ಭದಲ್ಲಿ ಎಲ್ಲ ಕಲಾವಿದರನ್ನು ಶಾಲುಹೊದಿಸಿ, ಫಲ ತಾಂಬೂಲ ನೀಡಿ ಗೌರವಿಸಲಾಯಿತು.