• Slide
    Slide
    Slide
    previous arrow
    next arrow
  • ಸನಾತನ ಸಂಸ್ಥೆಯ ಸಂಸ್ಥಾಪಕ ಆಠವಲೆಯವರ ಜನ್ಮೋತ್ಸವ; ಕುಮಟಾದಲ್ಲಿ ಹಿಂದೂ ಐಕ್ಯತಾ ಮೆರವಣಿಗೆ

    300x250 AD

    ಕುಮಟಾ: ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಜನ್ಮೋತ್ಸವದ ಅಂಗವಾಗಿ ದೇಶದಲ್ಲೆಡೆ ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಕುಮಾಟದಲ್ಲಿ 15 ಮೇ 2022 ರ ಭಾನುವಾರ ಹಿಂದೂ ಐಕ್ಯತಾ ಮೆರವಣಿಗೆ ನಡೆಯಿತು.
    ಕುಮಟಾದ ಶ್ರೀ ಮಹಾಸತಿ ದೇವಸ್ಥಾನದ ಮುಂಭಾಗದಲ್ಲಿ ಧ್ವಜಪೂಜೆಯನ್ನು ನಡೆಸಿ ಐಕ್ಯತಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕುಮಟಾದ ಶ್ರೀ ಮಹಾಸತಿ ದೇವಸ್ಥಾನದ ಮುಂಭಾಗದಿಂದ ಹೊರಟು ಹಳೆ ಬಸ್ ಸ್ಟ್ಯಾಂಡ್ ಮೂಲಕ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಹಿಂದೂ ಐಕ್ಯತಾ ಮೆರವಣಿಗೆಯು ಸಾಗಿ ಸಮಾಪನಗೊಂಡಿತು.
    ಮೆರವಣಿಗೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಸ್ವಸಂರಕ್ಷಣೆಯ ಮಹತ್ವ ತಿಳಿಸುವ ಲಾಠಿ,ನಾನ್ ಚಾಕು ಗಳ ಪ್ರದರ್ಶನ ಮಾಡಿ ತೋರಿಸಲಾಯಿತು.ಮೆರವಣಿಗೆಯನ್ನು ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಮಾಡಿ ಮುಕ್ತಾಯ ಮಾಡಲಾಯಿತು.

    ಆಕರ್ಷಕ ಮೆರವಣಿಗೆ:
    ಡಾ. ಜಯಂತ ಆಠವಲೆಯವರ ಭಾವಚಿತ್ರದ ಅಲಂಕೃತ ವಾಹನ, ಜಾಗೃತಿ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ ಮಹಿಳೆಯರು ಮೆರವಣಿಗೆಯ ವಿಶೇಷತೆಯಾಗಿತ್ತು. ವಿವಿಧ ಧಾರ್ಮಿಕ ಸಂಸ್ಥೆಗಳು, ಹಿಂದೂ ಸಂಘಟನಗಳು, ಭಜನ ಮಂಡಳಿಗಳ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು.

    ಈ ಕಾರ್ಯಕ್ರಮದ ಧ್ವಜಪೂಜೆಯನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ದಂಪತಿಗಳು ನಡೆಸಿಕೊಟ್ಟರು. ಕುಮಟಾ ತಾಲೂಕ ಮಂಡಳಿ ಬಿ ಜೆ ಪಿ ಅಧ್ಯಕ್ಷರಾದ ಹೇಮಂತ್ ಗಾವಕರ್, ಬಿ ಜೆ ಪಿ ಪ್ರಾಂತೀಯ ಅಧ್ಯಕ್ಷ ಮಾರ್ಕಂಡೇಯ, ಮಂಗಳದಾಸ ನಾಯಕ್, ಸನಾತನ ಸಂಸ್ಥೆಯ ಸೌ. ರತ್ನಾ ಭಟ್, ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಕನ್ನಡ ಸಮನ್ವಯಕರಾದ ಶರತ್ ಕುಮಾರ್ ನಾಯ್ಕ್, ಸಂದೀಪ್ ಭಂಡಾರಿ, ಅರುಣ್ ನಾಯ್ಕ್, ಅಶೋಕ್ ಗೌಡ ಇನ್ನಿತರರು ಉಪಸ್ಥಿತರಿದ್ದರು.

    ರಾಮದಾಸ ಗುನಗಿ ಮಾತನಾಡುತ್ತಾ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಡಾ. ಜಯಂತ ಬಾಲಾಜಿ ಆಠವಳೆಯವರ ವೈಶಿಷ್ಟ ಪೂರ್ಣ ವಿಚಾರ ಮತ್ತು ಅವರು ಹಿಂದೂ ರಾಷ್ಟ್ರ ಸ್ಥಾಪನೆಗೆ ದೃಷ್ಟಿಯಿಂದ ಅವರ ಪ್ರಯತ್ನ ತುಂಬಾ ಮಹತ್ವದ್ದಾಗಿದೆ. ಡಾ. ಆಠವಳೆಯವರು ಸನಾತನ ಸಂಸ್ಥೆಯ ಮೂಲಕ ಸಮಾಜಕ್ಕೆ ಧರ್ಮಶಿಕ್ಷಣವನ್ನು ನೀಡಿ. ಸಮಾಜವನ್ನು ಉನ್ನತಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.

    ಹಿಂದೂ ರಾಷ್ಟ್ರದ ವಿಚಾರವನ್ನು ವಿರೋಧಿಸುವ ಪರಮ ಪೂಜ್ಯ ಡಾಕ್ಟರ್ ಆಠವಲೆಯವರು ನೇರವಾಗಿ ಕೇಳುವ ಪ್ರಶ್ನೆ. ನಿಮಗೆ ನಿರಪರಾಧಿಗಳು ಕೊಲ್ಲುವ,ಸ್ತ್ರೀಯರ ಮೇಲೆ ಸಾಮೂಹಿಕ ಬಲಾತ್ಕಾರ ಮಾಡುವ,ಹೆಣ್ಣು ಮಕ್ಕಳನ್ನು ಭೋಗದ ವಸ್ತು ಎಂದು ಮಾರಾಟ ಮಾಡುವ ಇಸ್ಲಾಮಿಕ್ ರಾಷ್ಟ್ರ ಬೇಕಾ?
    ಹೇಗೆ ಶಿವಾಜಿ ಮಹಾರಾಜರು ಸಾಧನೆಯ ಬಲದಿಂದ ಮೊಗಲರನ್ನು ಹಿಮ್ಮೆಟ್ಟಿ ಹಿಂದವೀ ಸ್ವರಾಜ್ಯ ಸ್ಥಾಪನೆ ಮಾಡಿದ್ದಾರೋ,ಪಾಂಡವರು ಭಗವಾನ್ ಶ್ರೀ ಕೃಷ್ಣ ನ ಸಹಾಯದಿಂದ ಧರ್ಮ ಸಂಸ್ಥಾಪನೆ ಮಾಡಿದ್ದಾರೋ ಅದೇ ರೀತಿಯಲ್ಲಿ ನಾವು ಸಾಧನೆಯನ್ನು ಮಾಡಿದರೆ ಮಾತ್ರ ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಸಹಭಾಗ ನೀಡಬಹುದು.ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಾರ್ಥನೆ ಮಾಡುವುದೂ ಸಹ ಸಾಧನೆ ಆಗಿದೆ ಎಂದು ಗುರುಗಳು ಹೇಳುತ್ತಾರೆ ಎಂದು ರತ್ನಾ ಭಟ್ ಗುರುಗಳ ವಿಚಾರವನ್ನು ಉಪಸ್ಥಿತರಿಗೆ ತಿಳಿಸಿದರು.

    ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆ, ಆಘಾತಗಳಿಗೆ ಹಿಂದೂ ರಾಷ್ಟ್ರ ಸ್ಥಾಪನೆ ಅನಿವಾರ್ಯವಾಗಿದೆ. ಹಾಗಾಗಿ ನಾವೆಲ್ಲರೂ ಹಿಂದೂರಾಷ್ಟ್ರ ಸ್ಥಾಪನೆಗಾಗಿ ಕಟಿಬದ್ಧರಾಗಿ ಹೊರಡಬೇಕಿದೆ ಮತ್ತು ಸಂಕಲ್ಪ ಮಾಡಬೇಕಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕರಾದ ಶರತ್ ಕುಮಾರ್ ನಾಯ್ಕ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    300x250 AD

    ಕೋಟ್…
    ಸನಾತನ ಸಂಸ್ಥೆಯು ಹಿಂದೂ ರಾಷ್ಟ್ರದ ಸ್ಥಾಪನೆಗೆ ದ್ಯೆಯಪ್ರೇರಿತರಾಗಿ ಹೋರಾಡುತ್ತಿದ್ದರೆ –
    ಶ್ರೀ ರಾಮದಾಸ ಗುನಗಿ, ಕುಮಟಾ .

    ಸಾಧನೆಯ ಬಲದಿಂದಲೇ ಹಿಂದೂ ರಾಷ್ಟ್ರ ಸ್ಥಾಪನೆ –ಸೌ. ರತ್ನಾ ಭಟ್*

    ಹಿಂದೂರಾಷ್ಟ್ರ ಸ್ಥಾಪನೆಯ ಸಂಕಲ್ಪ ಮಾಡೋಣ – ಶ್ರೀ ಶರತ್ ಕುಮಾರ್ ನಾಯ್ಕ್, ಸಮಿತಿ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ, ಉತ್ತರಕನ್ನಡ ಜಿಲ್ಲೆ

    Share This
    300x250 AD
    300x250 AD
    300x250 AD
    Leaderboard Ad
    Back to top