ಶಿರಸಿ: ನಿರಂತರ 31 ವರ್ಷದಿಂದ ಜಿಲ್ಲಾ ಮತ್ತು ರಾಜ್ಯದಲ್ಲಿ ಅರಣ್ಯವಾಸಿಗಳ ಪರ ಹೋರಾಟ ಮಾಡಿಕೊಂಡಿರುವ ರವೀಂದ್ರ ನಾಯ್ಕ ಇತ್ತೀಚಿನ ದಿನಗಳಲ್ಲಿ ಹೋರಾಟದ ಕಾರ್ಯಕ್ಕೆ ಹೋರಾಟ ವಾಹಿನಿ ಮಾಡಿಕೊಂಡಿರುವದು ವಿಶೇಷ.
ಸಾರ್ವಜನಿಕ ಸಾಮಾಜಿಕ ಕಾರ್ಯದಲ್ಲಿ ಜನಸಾಮಾನ್ಯರು ಕುಟುಂಬಸ್ಥರ ಮತ್ತು ದೇವರ ಹೆಸರುಗಳ ಅಡಿಯಲ್ಲಿ ಸಮಾಜ ಸೇವೆ ಸಂಸ್ಥೆಗಳನ್ನು ಹುಟ್ಟು ಹಾಕುವದು ಹಾಗೂ ಇನ್ನಿತರ ಸಮಾಜ ಸೇವೆ ಕಾರ್ಯ ನಿರ್ವಹಿಸುತ್ತಿರುವುದ ಸಾಮಾನ್ಯವಾಗಿ ಇಂದಿನ ಸಮಾಜದಲ್ಲಿ ಕಂಡುಬರುವಂತಹ ಸಂಗತಿ.
ಸಂಘಟನೆ, ಹೋರಾಟ, ಆಂದೋಲನದ ಮೂಲಕ ಅರಣ್ಯವಾಸಿಗಳ ಭೂಮಿ ಹಕ್ಕಿಗಾಗಿ ತೊಡಗಿಸಿಕೊಂಡಿರುವ ರವೀಂದ್ರ ನಾಯ್ಕ, ಅರಣ್ಯಾಸಿಗಳಿಗೆ ಹೆಚ್ಚಿನ ಜಾಗೃತೆ ಮೂಡಿಸುವ ಉದ್ದೇಶದಿಂದ ವಿಶೇಷವಾದ ವಿನ್ಯಾಸ ಹೊಂದಿರುವ ಹೋರಾಟದ ವಾಹಿನಿ (ಟೆಂಪೋ ಟ್ರಾವಲರ್) ಮೂಲಕ ಫೇ. 28 ರಂದು ಕುಮಟಾದಲ್ಲಿ ‘ಅರಣ್ಯವಾಸಿಗಳನ್ನ ಉಳಿಸಿ- ಜಾಥಕ್ಕೆ’ ಚಾಲನೆ ನೀಡಿರುವದು ಹೋರಾಟದ ಇತಿಹಾಸದಲ್ಲಿ ವಿಶೇಷ ಸಂಗತಿ ಎಂದರೆ ತಪ್ಪಾಗಲಾರದು.
ಇಗಾಗಲೇ ಜಿಲ್ಲೆಯಲ್ಲಿ 365 ಕ್ಕಿಂತ ಮಿಕ್ಕಿ ಹಳ್ಳಿಗಳಿಗೆ 5000 ಕೀ.ಮೀ ಅರಣ್ಯವಾಸಿಗಳ ಪ್ರದೇಶಗಳಲ್ಲಿ ಸಂಚರಿಸಿ ಅರಣ್ಯವಾಸಿಗಳಿಗೆ ಜಾಗೃತೆ ಮೂಡಿಸಿ ಮೇ 7 ರಂದು ಹೊನ್ನಾವರದಲ್ಲಿ ಅರಣ್ಯವಾಸಿಗಳನ್ನ ಉಳಿಸಿ ಬೃಹತ್ ಜಾಥದಲ್ಲಿ ಹೋರಾಟದ ವಾಹಿನಿ ಪ್ರಮುಖ
ಆಕರ್ಷಣೆಯಾಗಿತ್ತು.
ಹೋರಾಟದ ವಾಹಿನಿಗೆ ತಂದೆ- ತಾಯಿ ಹೆಸರು: ಕುಟುಂಬದ ಸದಸ್ಯರ ಅನುಮತಿ, ಸಹಾಯ, ಸಹಕಾರದಿಂದ ಹೋರಾಟದ ವಾಹಿನಿ(ಟೆಂಪೋ ಟ್ರಾವಲರ್) ಗೆ ಸುಮಾರು 7 ಲಕ್ಷದಷ್ಟು ವೆಚ್ಚಮಾಡಿ ಹೋರಾಟಕ್ಕೆ ಗಟ್ಟಿತನ ಮತ್ತು ಅರಣ್ಯವಾಸಿಗಳಿಗೆ ಹೆಚ್ಚಿನ ಜಾಗೃತೆ ಮೂಡಿಸುವ ಉದ್ದೇಶದಿಂದ ತನ್ನ ತಾಯಿ ಶಾಂತಿ, ತಂದೆ ನಾರಾಯಣ ಹೀಗೆ ಹೋರಾಟದ ವಾಹಿನಿಗೆ ‘ಶಾಂತಿ- ನಾರಾಯಣ’ ಹೆಸರನ್ನು ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗಿದ್ದು ಗಮನಾರ್ಹ. ಅಲ್ಲದೇ, ಕುಟುಂಬ ವರ್ಗದ ಪ್ರೇರಣೆ ಮೇರೆಗೆ ಹೋರಾಟದ ವಾಹಿನಿ ಮೂಲಕ ಅರಣ್ಯವಾಸಿಗಳ ಸೇವೆಯು ದಿವಂಗತ ತಂದೆ ಮತ್ತ ತಾಯಿ ಸೇವೆಗೆ ಸಮಾನ ಎಂದು ಭಾವಿಸಿ ಹೋರಾಟದ ವಾಹಿನಿಯನ್ನ ಉಪಯೋಗಿಸುತ್ತಿದ್ದೇನೆ ಎಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ. .