ಶಿರಸಿ: ತಾಲೂಕಿನ ಕ್ಯಾದಗಿ ಪಂಚಾಯತಿ ಬಾಳಗೋಡ-ಕಸಗೋಡ ಕಾಂಕ್ರೀಟ್ ರಸ್ತೆಯ ನಿರ್ಮಾಣ ರೂ.20 ಲಕ್ಷ, ಕಸಗೋಡ ಬಾಂದಾರ ನಿರ್ಮಾಣ ಕಾಮಗಾರಿ ರೂ.75 ಲಕ್ಷ, ವಾಜಗೋಡ ಪಂಚಾಯತಿ ಗೊದ್ಲಮನೆ ಕಾಂಕ್ರೀಟ್ ರಸ್ತೆ ಕಾಮಗಾರಿ ರೂ.50 ಲಕ್ಷ, ಇಟಗಿ ಪಂಚಾಯತಿ ಲಂಬಾಪುರ- ಇಟಗಿ ರಸ್ತೆಯ ಸೇತುವೆ ನಿರ್ಮಾಣ ರೂ.57 ಲಕ್ಷ ಕಾಮಗಾರಿಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಾಜಗೋಡ ಪಂಚಾಯತಿ ಅಧ್ಯಕ್ಷೆ ಚಂದ್ರಕಲಾ ಎಸ್.ನಾಯ್ಕ, ಮಂಗಲಾ ಗೌಡ, ಸದಸ್ಯರಾದ ಕೃಷ್ಣಮೂರ್ತಿ ನಾಯ್ಕ್ , ಸರಸ್ವತಿ ಗೌಡ, ಎಸ್.ಎಮ್.ಭಟ್ಟ, ಇಟಗಿ ಪಂಚಾಯತಿ ಅಧ್ಯಕ್ಷ ಸುರೇಂದ್ರ ಗೌಡ, ಉಪಾಧ್ಯಕ್ಷ ಪಾರ್ವತಿ ನಾಯ್ಕ, ಬಿಳಗಿ ಪಂಚಾಯತಿ ಉಪಾಧ್ಯಕ್ಷ ಮಹೇಶ ನಾಯ್ಕ, ಬಿಳಗಿ ಪಂಚಾಯತಿ ಸದಸ್ಯ ಆದರ್ಶ ಪೈ, ಕ್ಯಾದಗಿ ಪಂಚಾಯತಿ ಉಪಾಧ್ಯಕ್ಷ ಎಸ್.ಎನ್.ಹೆಗಡೆ, ಸದಸ್ಯ ದತ್ತು ಭಟ್ಟ, ಪಟ್ಟಣ ಪಂಚಾಯತಿ ಸದಸ್ಯರಾದ ಮಾರುತಿ ನಾಯ್ಕ, ಸುರೇಶ ನಾಯ್ಕ ಬಾಲಿಕೊಪ್ಪ, ಬಿಳಗಿ ಸೊಸೈಟಿ ಅಧ್ಯಕ್ಷರಾಧ ರಾಘವೇಂದ್ರ ಶಾಸ್ತ್ರೀ, ಪ್ರಮುಖರಾದ ಗಣಪತಿ ನಾಯ್ಕ ಕಸಗೋಡ, ಎಮ್.ಎನ್.ಹೆಗಡೆ, ಶ್ರೀಕಾಂತ ಹೆಗಡೆ, ಸುಧಾಕರ ನಾಯ್ಕ, ಎಮ್.ಐ.ನಾಯ್ಕ ಕೆಳಗಿನಸಸಿ, ವಿ.ಜಿ.ನಾಯ್ಕ ಕೆಳಗಿನಸಸಿ, ಎನ್.ಜಿ.ಹೆಗಡೆ ಗೊದ್ಲಮನೆ, ಗಜಾನನ ಹೆಗಡೆ ಕೊಡ್ತಗಣಿ,ರಮಾನಂದ ನಾಯ್ಕ ಹರ್ಗಿ,ಶ್ರೀಧರ ಹೆಗಡೆ ಬೈಲಳ್ಳಿ ಹಾಗೂ ಊರಿನ ಗ್ರಾಮಸ್ಥರು ಇದ್ದರು.