• Slide
    Slide
    Slide
    previous arrow
    next arrow
  • ಹುಲಿಗಳ ಗಣತಿ; ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವ ವಿಶ್ವಾಸ

    300x250 AD

    ದಾಂಡೇಲಿ: ಹುಲಿ ಸಂರಕ್ಷಿತ ಪ್ರದೇಶದ ವಿಭಾಗಗಳಾದ ಉತ್ತರ ಕನ್ನಡ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಕ್ಯಾಮೆರಾ ಟ್ರ್ಯಾಪ್ ಮೂಲಕ ಆರಂಭಗೊಂಡಿದ್ದ ಹುಲಿಗಳ ಗಣತಿ ಕಾರ್ಯವನ್ನು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಮುಗಿಸಿದ್ದಾರೆ. ಇನ್ನೆರೆಡು ತಿಂಗಳಲ್ಲಿ ಹುಲಿಗಳ ಖಚಿತ ಸಂಖ್ಯೆ ತಿಳಿದು ಬರಲಿದ್ದು, ವನ್ಯಜೀವಿ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.

    ಹುಲಿ ಸಂರಕ್ಷಿತ ಪ್ರದೇಶದಲ್ಲಿ 4 ವರ್ಷಗಳಿಗೊಮ್ಮೆ ತಜ್ಞರ ನೇತೃತ್ವದಲ್ಲಿ ಪ್ರತಿ 150 ಹೆಕ್ಟೇರ್ ಪ್ರದೇಶಕ್ಕೆ 3 ಬೀಟ್ ಗಾರ್ಡ್‍ಗಳನ್ನು ಬಳಸಿಕೊಂಡು ಸಮಿಕ್ಷೆ ನಡೆಸಲಾಗುತ್ತದೆ. ಹುಲಿಗಳು ಹೆಚ್ಚಾಗಿ ಓಡಾಡುವ ಕಾಳಿ ಹುಲಿ ಸಂರಕ್ಷಿತ ಪ್ರದೇಶವನ್ನು ಸಮಿಕ್ಷೆಯ ಕೇದ್ರವನ್ನಾಗಿಸಿಕೊಂಡು ಹುಲಿಗಳ ಗಣತಿ ಕಾರ್ಯ ನಡೆಸಲಾಗಿದೆ. ಡಿಸೆಂಬರ 2021 ರಿಂದ ಆರಂಭಗೊಂಡಿದ್ದ ಹುಲಿಗಳ ಗಣತಿ ಕಾರ್ಯವು ಎಪ್ರಿಲ್ 2022 ರವರೆಗೆ 5 ತಿಂಗಳುಗಳ ಕಾಲ ನಡೆಯಿತು. ಕ್ಯಾಮೆರಾ ಟ್ರ್ಯಾಪ್ ಮೂಲಕ ಹುಲಿಗಳ ಚಲನವಲನಗಳ ಕುರುಹುಗಳನ್ನು ಸಂಗ್ರಹಿಸಿ ರಾಷ್ಟ್ರೀಯ ಹುಲಿ ಪ್ರಾಧಿಕಾರಕ್ಕೆ ದಾಖಲೆಗಳನ್ನು ಕಳುಹಿಸಲಾಗಿದೆ. ಅಂತಿಮವಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಹುಲಿಗಳ ಖಚಿತ ಸಂಖ್ಯೆ ಹೊರಬರಲಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶವು (ಕಾಳಿ ಟೈಗರ್ ರಿಸರ್ವ್) 1,300 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದ್ದು ಪ್ರತಿವರ್ಷ ಗಣತಿ ಕಾರ್ಯ ನಡೆಸಲಾಗುತ್ತದೆ. 2018 ರಲ್ಲಿ ನಡೆಸಿದ ಗಣತಿಯಲ್ಲಿ 7 ಹುಲಿಗಳು ಹಾಗೂ 2020 ರಲ್ಲಿ ನಡೆಸಿದ ಗಣತಿಯಲ್ಲಿ ಹುಲಿಗಳ ಸಂತತಿ ಏರಿಕೆಯಾಗಿ 24 ಹುಲಿಗಳು ಇರುವುದು ಪತ್ತೆಯಾಗಿತ್ತು. ಕಾಳಿ ಹುಲಿ ಸಂರಕ್ಷಿತ ಪ್ರದೆಶವನ್ನು ಹುಲಿಗಳ ವಾಸಕ್ಕೆ ಯೊಗ್ಯವಾದ ಸ್ಥಳವೆಂದು ಗುರುತಿಸಲಾಗಿದೆ. ಈ ಬಾರಿ ನಡೆಸಿದ ಗಣತಿ ಕಾರ್ಯದಲ್ಲಿ ಹುಲಿಗಳ ಸಂಖ್ಯೆ ಇನ್ನಷ್ಟು ಏರಿಕೆ ಆಗಿರುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಭಾರತ ದೇಶದಲ್ಲಿ 524 ಹುಲಿಗಳನ್ನು ಹೊಂದಿರುವ ಕರ್ನಾಟಕ ರಾಜ್ಯ ಎರಡನೇಯ ಸ್ಥಾನದಲ್ಲಿದ್ದರೆ, 526 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶ ರಾಜ್ಯ ಮೊದಲನೇ ಸ್ಥಾನದಲ್ಲಿದೆ.

    300x250 AD

    ಹುಲಿಗಳಿಗೆ ಫಿಂಗರ್ ಪ್ರಿಂಟ್ ಪಟ್ಟೆಗಳು; ಮನುಷ್ಯರಿಗೆ ಫಿಂಗರ್ ಪ್ರಿಂಟ್ ಇರುವ ರಿತಿಯಲ್ಲಿಯೇ ಹುಲಿಗಳ ಮೈಮೇಲೆ ಪಟ್ಟೆಗಳು ಇರುತ್ತವೆ. ಒಂದು ಹುಲಿಗೆ ಇದ್ದಂತೆ ಬೇರೊಂದು ಹುಲಿಗೆ ಅದೇ ರೀತಿಯ ಪಟ್ಟೆಗಳು ಇರುವುದಿಲ್ಲ. ಈ ಕ್ರಮವನ್ನು ಆಧರಿಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹುಲಿಗಳ ಎಣಿಕೆ ಕಾರ್ಯ ನಡೆಸುತ್ತದೆ.

    ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಜಿಲ್ಲೆಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಗಣತಿ ಕಾರ್ಯ ನಡೆಸಲಾಗಿದೆ. ಕ್ಯಾಮೆರಾ ಟ್ರ್ಯಾಪ್ ಮೂಲಕ ದಾಖಲೆಗಳನ್ನು ಸಂಗ್ರಹಿಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಇನ್ನೆರೆಡು ತಿಂಗಳಲ್ಲಿ ಹುಲಿಗಳ ಖಚಿತ ಸಂಖ್ಯೆ ತಿಳಿದುಬರಲಿದೆ ಎಂದು ಕಾಳಿಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮರಿಯಾ ಕ್ರಿಸ್ತುರಾಜ್ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top